45 ದಿನಗಳ ಹಿಂದಷ್ಟೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಅಲೋಕ್ ಕುಮಾರ್ ಅವರನ್ನು ನೂತನ ಬಿಜೆಪಿ ಸರ್ಕಾರ ಏಕಾಏಕೀ ವರ್ಗಾವಣೆ ಮಾಡಿದೆ. ಎಡಿಜಿಪಿ ಭಾಸ್ಕರ್ ಅವರನ್ನು ನೂತನ ಆಯುಕ್ತರಾಗಿ ನೇಮಿಸಲಾಗಿದೆ.

ಅಲೋಕ್ ಕುಮಾರ್ ಅವರನ್ನು ಕರ್ನಾಟಕ ಮೀಸಲು ಪೊಲೀಸ್ ಪಡೆಗೆ ವರ್ಗಾಯಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಎಡಿಜಿಪಿ ಆಗಿದ್ದ ಭಾಸ್ಕರ್ ರಾವ್ ಅವರನ್ನು ಕಮೀಷನರ್ ಹುದ್ದೆಗೆ ನೇಮಿಸಿದೆ.
FIRST ಎಂದು ಕೂಪನ್ ಕೋಡ್ ಬಳಸಿ ಪೇಟಿಎಂನಿಂದ ಬಂಪರ್ ಆಫರ್ ಪಡೆಯಿರಿ
ದೋಸ್ತಿ ಸರ್ಕಾರದ ಅವಧಿಯಲ್ಲಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನ ಎಡಿಜಿಪಿಯಾಗಿ ಬಡ್ತಿ ನೀಡಿ ನಗರ ಪೊಲೀಸ್ ಕಮೀಷನರ್ ಹುದ್ದೆ ನೀಡಲಾಗಿತ್ತು.
ಅಲೋಕ್ ನೇಮಕವಾಗುವ ಮುನ್ನ ಕಮಿಷನರ್ ಹುದ್ದೆಗೆ ಸುನೀಲ್ ಅಗರ್ವಾಲ್, ಭಾಸ್ಕರ್ ರಾವ್, ಅಲೋಕ್ ಮೋಹನ್, ಕಮಲ್ ಪಂಥ್ ಹಾಗೂ ಪ್ರತಾಪ್ ರೆಡ್ಡಿಯವರ ಹೆಸರು ಕೇಳಿ ಬಂದಿತ್ತು. ಆದರೆ ಭಡ್ತಿ ನೀಡುವ ಮೂಲಕ ಅಲೋಕ್ ಅವರನ್ನು ನೇಮಕ ಮಾಡಲಾಗಿತ್ತು. ಇದು ಹಿರಿಯ ಅಧಿಕಾರಿಗಳಿಗೆ ಬೇಸರ ಸಹ ತರಿಸಿತ್ತು.
ಈ ಕಾರಣದಿಂದ ಹಿರಿಯ ಅಧಿಕಾರಿಗಳನ್ನು ಸಮಾಧಾನಗೊಳಿಸುವ ಸಲುವಾಗಿ ಬಿಜೆಪಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಹಾಗೇ ನೋಡಿದರೆ ಕೆಲವೊಂದು ನಗರಗಳ ಆಯುಕ್ತರಾಗಬೇಕಾದರೆ ಹಿರಿತನಕ್ಕಿಂತ ಕಾನೂನು ಸುವ್ಯವಸ್ಥೆ ಮತ್ತು ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಮನಸ್ಸಿರುವ ಅಧಿಕಾರಿಗಳು ಬೇಕು. ಅಲೋಕ್ ಕುಮಾರ್ ಆ ಮಟ್ಟಿಗೆ ಸೂಕ್ತ ವ್ಯಕ್ತಿ. ಅಲೋಕ್ ಅವರು ಆಯುಕ್ತರಾದ ನಂತರ ಬೆಂಗಳೂರಿನ ಅನೇಕ ಭಾಗಗಳಲ್ಲಿ ಪುಂಡು ಪೋಕರಿಗಳ ಕಾಟ ನಿಂತಿತ್ತು. ಜೊತೆಗೆ ನಿದ್ದೆಗಣ್ಣಿನಲ್ಲಿದ್ದ ಅನೇಕ ಠಾಣೆಗಳು ಎಚ್ಚರವಾಗಿತ್ತು. ರೌಡಿಗಳ ಅಟ್ಟಹಾಸ, ರಿಯಲ್ ಎಸ್ಟೇಟ್ ಕುಳಗಳ ಕಾಟ, ಬಡ್ಡಿಕೋರರ ಜಾತ್ರೆ, ದಂಧೆಕೋರರ ಆಟಕ್ಕೂ ಬ್ರೇಕ್ ಬಿದ್ದಿತ್ತು.
ಹೀಗಾಗಿ ಅಲೋಕ್ ಅವರಿಗೆ ಮತ್ತಷ್ಟು ಜವಾಬ್ದಾರಿ ಕೊಟ್ಟು ಆಯುಕ್ತರನ್ನಾಗಿ ಮುಂದುವರಿಸಿದ್ದರೆ ಬೆಂಗಳೂರಿನಲ್ಲಿ ನೆಮ್ಮದಿಯಾದರೂ ನೆಲೆಸುತ್ತಿತ್ತು.
ಹಾಗಾದರೆ ಈಗ ನೇಮಕವಾಗಿರುವ ಭಾಸ್ಕರ ರಾವ್ ಸೂಕ್ತ ವ್ಯಕ್ತಿಯಲ್ಲವೇ ಖಂಡಿತಾ ಹೌದು, ಆದರೆ ಅಲೋಕ್ ಕುಮಾರ್ ಈಗಾಗಲೇ ಬೆಂಗಳೂರಿಗಳ ನೆಮ್ಮದಿಗಾಗಿ ನೀಲ ನಕ್ಷೆಯೊಂದನ್ನು ರಚಿಸಿಕೊಂಡಿದ್ದರು. ಅದನ್ನು ಜಾರಿ ಮಾಡುವ ಅವಕಾಶವನ್ನಾದರೂ ಕೊಡಬಹುದಾಗಿತ್ತು.
ಹೋಗ್ಲಿ ರಾಜಕೀಯ ಕಾರಣಕ್ಕೆ ಅದು ಅಸಾಧ್ಯವಾಗಿದ್ದರೆ ಸಿಸಿಬಿಗಾದರೂ ಅವರನ್ನು ಮುಖ್ಯಸ್ಥರನ್ನಾಗಿ ಮಾಡಬಹುದಾಗಿತ್ತು.
Discussion about this post