ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ಭೀತಿ ಎದುರಾಗಿದೆ.
ಕಾವಲ್ ಭೈರಸಂದ್ರದ ಮಂಜುಶ್ರೀ ನರ್ಸಿಂಗ್ ಕಾಲೇಜು ಮತ್ತು ಬೊಮ್ಮನಹಳ್ಳಿಯ ಎಸ್ಎನ್ಎನ್ ರಾಜ್ ಲೇಕ್ ವ್ಯೂ ಅಪಾರ್ಟ್ ಮೆಂಟ್ ಪ್ರಕರಣದಿಂದ ಆಂತಕ ಶುರುವಾಗಿದೆ.
ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡಲಾರಂಭಿಸಿದ್ದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.
ಕಾವಲ್ ಭೈರಸಂದ್ರದ ಮಂಜುಶ್ರೀ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪಲ್ಸ್ ಪೊಲೀಯೋ ಆಂದೋಲನದಲ್ಲಿ ಪಾಲ್ಗೊಂಡಿದ್ದರು ಅನ್ನುವ ಮಾಹಿತಿಗಳಿದ್ದು ಇನ್ನೂ ಪಾಲಿಕೆ ಖಚಿತಪಡಿಸಿಲ್ಲ..
ಈ ನಡುವೆ ಬೊಮ್ಮಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ಸೋಂಕಿತರ ಸಂಖ್ಯೆ 103ಕ್ಕೆ ಏರಿದ್ದು ಇದರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿರಿಯ ನಾಗಕರಿದ್ದಾರೆ.
ಜೊತೆಗೆ ರೋಗಲಕ್ಷಣಗಳಿಲ್ಲದ ಮಂದಿಯಲ್ಲೇ ಸೋಂಕು ಪತ್ತೆಯಾಗಿದೆ. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆಗಳನ್ನು ಬೆಂಗಳೂರು ನಾಗರಿಕರು ವಹಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಪಾರ್ಟಿ ಹಾಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ, ಆಪಾರ್ಟ್ ಮೆಂಟ್ ಗಳಲ್ಲಿ ಗುಂಪುಗೂಡಬೇಡಿ, ಎಸಿ ಹಾಲ್ ಗಳಲ್ಲಿ ಗುಂಪು ಸೇರಲೇಬೇಡಿ.
ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾದರೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಮಾಡಿ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿ ಮಂಗಳವಾರ 306 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. 133 ಮಂದಿ ಗುಣಮುಖರಾಗಿದ್ದಾರೆ, ಜೊತೆಗೆ ಕೊರೋನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಇನ್ನು 306 ಸೋಂಕಿತರ ಪೈಕಿ 64 ಮಂದಿಯ ಸ್ಥಿತಿ ಗಂಭೀರವಾಗಿದೆ.
Discussion about this post