ಬೆಂಗಳೂರು : ಒಂದೆಡೆ ರಾಜ್ಯ ಸರ್ಕಾರ SSLC ಪರೀಕ್ಷೆ ನಡೆಸಲು ಸಿದ್ದತೆ ನಡೆಸುತ್ತಿದೆ. ಮಕ್ಕಳು ಕೂಡಾ ಶೈಕ್ಷಣಿಕ ಹಂತದ ಪ್ರಮುಖ ಘಟ್ಚ ಅನ್ನಿಸಿರುವ sslc ಪರೀಕ್ಷೆ ಸಜ್ಜಾಗುತ್ತಿದ್ದಾರೆ.
ಈ ನಡುವೆ ಜೂನ್ 25ರಿಂದ ಪರೀಕ್ಷೆ ಬರೆಯಬೇಕಾಗಿರುವ ಬೆಂಗಳೂರಿನ ಇಬ್ಬರು SSLC ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದೆ. ಹೀಗಾಗಿ ಪರೀಕ್ಷೆ ಬರೆಯಲು ಸಿದ್ದವಾಗುತ್ತಿರುವ ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ.
ಬೆಂಗಳೂರು ಕಲಾಸಿಪಾಳ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮೃತರಾಗಿದ್ದ ಮಹಿಳೆ ಸಂಪಕ್ತದಲ್ಲಿದ್ದ 2 SSLC ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದೆ. ಇಬ್ಬರನ್ನೂ ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸಂಪರ್ಕದಲ್ಲಿದ್ದ 5 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
Discussion about this post