ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಸಿಡಿ ಅಸಲಿಯೋ ನಕಲಿಯೋ ಎಂದು ತೀರ್ಮಾನವಾಗುವ ಮೊದಲೇ ಸಿಡಕೋರರ ಬಂಧನಕ್ಕೆ ಎಸ್ಐಟಿ ಬಲೆ ಬೀಸಿದೆ.
ಜೊತೆಗೆ ರಮೇಶ್ ಜಾರಕಿಹೊಳಿಯವರನ್ನು ಸಂತ್ರಸ್ಥ ಅನ್ನುವಂತೆ ಬಿಂಬಿಸುವ ಪ್ರಯತ್ನ ಕೂಡಾ ಸಾಗಿದೆ.
ಇಡೀ ರಾಜ್ಯದ ಮುಂದೆ ಜನಪ್ರತಿನಿಧಿಯೊಬ್ಬ ಬೆತ್ತಲಾಗಿದ್ದರೂ, ಆತನನ್ನು ನಿರಪರಾಧಿ ಅನ್ನುವಂತೆ ಬಿಂಬಿಸಲು ಬೇಕಾದ ಎಲ್ಲಾ ಸಿದ್ದತೆಗಳು ಸದ್ದಿಲ್ಲದೆ ನಡೆಯುತ್ತಿದೆ.

ಈ ನಡುವೆ ಸದನ ಕಲಾಪವನ್ನು ಕೂಡಾ ರಮೇಶ್ ಜಾರಕಿಹೊಳಿ ಸಾಧನೆ ನುಂಗಿ ಹಾಕಿದೆ.
ಎಸ್ಐಟಿ ಬದಲು ನ್ಯಾಯಾಂಗ ತನಿಖೆ ಪಟ್ಟು ಹಿಡಿದಿರುವ ಕಾಂಗ್ರೆಸ್ ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಸವಾಲು ಹಾಕಿದೆ. ಆದರೆ ರಾಜ್ಯ ಸರ್ಕಾರ ಅತ್ಯಾಚಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಅನ್ನುವ ಮೂಲಕ ನೇರವಾಗಿ ಜಾರಕಿಹೊಳಿ ರಕ್ಷಣೆ ನಿಂತಿದೆ ಅನ್ನುವುದು ಪ್ರತಿಪಕ್ಷದ ಆರೋಪ.
ಈ ನಡುವೆ ಸಿದ್ದರಾಮಯ್ಯ ಅವರು ರಮೇಶ್ ಜಾರಕಿಹೊಳಿ ಅವರನ್ನು ಅತ್ಯಾಚಾರಿ ಎಂದು ಪದೇ ಪದೇ ಉಲ್ಲೇಖಿಸಿರುವುದು ರಮೇಶ್ ಸಹೋದರ ಬಾಲಚಂದ್ರ ಅವರಿಗೆ ಇರಿಸು ಮುರಿಸು ಉಂಟು ಮಾಡಿದೆ.

ಈ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿರು ಅವರು ಸಿದ್ದರಾಮಯ್ಯ ರೇಪ್ ಪದ ಬಳಕೆ ಮಾಡೋದು ಸರಿಯಲ್ಲ. ಮಾಜಿ ಮುಖ್ಯಮಂತ್ರಿಯಾಗಿ ಇದು ಅವರಿಗೆ ಶೋಭೆ ತರುವುದಿಲ್ಲ ಅಂದಿದ್ದಾರೆ.
ಉಪಚುನಾವಣೆ ಬರುತ್ತಿರುವ ಕಾರಣ ಕಾಂಗ್ರೆಸ್ ಈ ಆರೋಪ ಮಾಡುತ್ತಿದೆ ಎಂದು ದೂರಿರುವ ಬಾಲಚಂದ್ರ ಜಾರಕಿಹೊಳಿ ಯುವತಿಯನ್ನು ಒಂದು ತಂಡ ಹಿಡಿದಿಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ.
Discussion about this post