ಪ್ಯಾರಾಲಿಂಪಿಕ್ ಕೊನೆಯ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಅವರು ಹಾಂಕಾಂಗ್ ನ ಚು ಮನ್ ಕೈ ಅವರನ್ನು ಸೋಲಿಸಿ ಚಿನ್ನದ ಪದಕ ಗಳಿಸಿದ್ದಾರೆ.
ಹಾಂಕಾಂಗ್ ದೇಶದ ಚು ಮನ್ ಕೈ ಅವರನ್ನು 21-17, 16-21, 21-17 ಸೆಟ್ ಗಳಿಂದ ಕೃಷ್ಣ ನಗರ್ ಸೋಲಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ ನಲ್ಲಿ ಭಾರತ 19 ಪದಕ ಗಳಿಸಿದ್ದು, ಇದರಲ್ಲಿ 5 ಚಿನ್ನದ ಪದಕ, 8 ಬೆಳ್ಳಿ ಮತ್ತು 6 ಕಂಚಿನ ಪದಕ ಸೇರಿದೆ.
ಇನ್ನು ಈ ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ 19 ಪದಕಗಳನ್ನು ಗೆದ್ದುಕೊಂಡಿರುವ ಭಾರತ 24ನೇ ಸ್ಥಾನದಲ್ಲಿದೆ. ಇನ್ನು 206 ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದ್ದು 124 ಪದಕಗಳ ಮೂಲಕ ಗ್ರೇಟ್ ಬ್ರಿಟನ್ ಎರಡನೇ ಸ್ಥಾನದಲ್ಲಿದೆ.
ಪ್ಯಾರಾಲಿಂಪಿಕ್ಸ್ 2021 ಆಗಸ್ಟ್ 24ರಂದು ಆರಂಭವಾಗಿದ್ದು ಇಂದು ಮುಕ್ತಾಯವಾಗಲಿದೆ. ಟೆಕ್ ಚಂದ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಧ್ವಜವನ್ನು ಹೊತ್ತು ಮುನ್ನಡೆದಿದ್ದರು. ಮುಕ್ತಾಯ ಸಮಾರಂಭದಲ್ಲಿ ಶೂಟರ್ 19 ವರ್ಷದ ಆವನಿ ಲೆಖರಾ ಭಾರತದ ಧ್ವಜವನ್ನು ಹೊತ್ತು ಮುನ್ನಡೆಯಲಿದ್ದಾರೆ.
Discussion about this post