ಮುಂಬರುವ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮೋದಿ ಅಲೆಯ ನಡುವೆ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಚಿತ ಆಫರ್ ಗಳ ಮೊರೆ ಹೋಗಿದ್ದಾರೆ.
ಉಚಿತ ವಿದ್ಯುತ್ ಕೊಟ್ಟ ಕೇಜ್ರಿವಾಲ್ ಕಡೆಯಿಂದ ಉಚಿತ ಇಂಟರ್ನೆಟ್...! 1
ಈಗಾಗಲೇ 200 ಯುನಿಟ್ ವರೆಗೆ ಉಚಿತ ವಿದ್ಯುತ್,
ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಭಾಗ್ಯ ಕೊಟ್ಟಿರುವ ಕೇಜ್ರಿವಾಲ್ ಇದೀಗ ಉಚಿತ ಇಂಟರ್
ನೆಟ್ ಭಾಗ್ಯ ಘೋಷಿಸಿದ್ದಾರೆ.
ಕೇಜ್ರಿವಾಲ್ ನಡೆ ನೋಡಿದರೆ ತಮಿಳುನಾಡು ರಾಜಕಾರಣಿಗಳನ್ನು ಮೀರಿಸುವಂತೆ ಕಾಣಿಸುತ್ತಿದ್ದಾರೆ. ಕರುಣಾನಿಧಿ ಮತ್ತು ಜಯಲಲಿತಾ ತಮ್ಮ ಜೀವಿತಾವಧಿಯಲ್ಲಿ ಘೋಷಿಸಿದ ಉಚಿತ ಭಾಗ್ಯಗಳಿಗೆ ಲೆಕ್ಕವೇ ಇಲ್ಲ.
ಉಚಿತ ವಿದ್ಯುತ್ ಕೊಟ್ಟ ಕೇಜ್ರಿವಾಲ್ ಕಡೆಯಿಂದ ಉಚಿತ ಇಂಟರ್ನೆಟ್...! 2
ಇದೀಗ ಅದೇ ಹಾದಿ ತುಳಿದಿರುವ ಕೇಜ್ರಿವಾಲ್ ಪ್ರತಿ
ವ್ಯಕ್ತಿ ತಿಂಗಳಿಗೆ 15 ಜಿಬಿ ಇಂಟರ್ ನೆಟ್ ಪಡೆಯುವ ಯೋಜನೆ ಘೋಷಿಸಿದ್ದಾರೆ. ಈ ಯೋಜನೆ ಸಲುವಾಗಿ
ವಾರ್ಷಿಕ 100 ಹೊರೆಯನ್ನು ಬೊಕ್ಕಸ ಹೊರಬೇಕಾಗಿದೆ.
ಮೊದಲನೇ ಹಂತದಲ್ಲಿ ದೆಹಲಿಯೆಲ್ಲೆಡೆ 11 ಸಾವಿರ ಹಾಟ್ ಸ್ಪಾಟ್ ಗಳನ್ನು ಇದಕ್ಕಾಗಿ ಸ್ಥಾಪಿಸಲಾಗುತ್ತದೆ. ಒಂದು ಹಾಟ್ ಸ್ಪಾಟ್ 50 ಮೀಟರ್ ವ್ಯಾಪ್ತಿ ಕಾರ್ಯಾಚರಿಸುತ್ತದೆ. ಮತ್ತು 200 Mbps ವೇಗ ಹೊಂದಿರುತ್ತದೆ.
Discussion about this post