ಬೆಂಗಳೂರು : ಮೂರನೇ ಅಲೆ ಮಕ್ಕಳಿಗೆ ಬರಲಿದೆ, ಬರುವುದಿಲ್ಲ ಅನ್ನುವ ತಜ್ಞರ ಗೊಂದಲದ ನಡುವೆಯೇ, ಬೆಂಗಳೂರಿನಲ್ಲಿ ನಡೆದಿರುವ ಬೆಳವಣಿಗೆ ಪೋಷಕರಲ್ಲಿ ಆತಂಕ ಮೂಡಿಸುವಂತಿದೆ. ಮೂರನೇ ಅಲೆಗೂ ಮುನ್ನ ಸೋಂಕು 3 ಪಟ್ಟು ಏರಿರುವುದನ್ನು ನೋಡಿದರೆ ಮುಂದಿನ ದಿನಗಳನ್ನು ಊಹಿಸಿಕೊಳ್ಳಲು ಭಯವಾಗುತ್ತಿದೆ.
ಕಳೆದ 10 ದಿನಗಳ ಅವಧಿಯಲ್ಲಿ ಬೆಂಗಳೂರಿನ 499 ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿದೆ. ಈ ಪೈಕಿ 9 ವರ್ಷದೊಳಗಿನ 194 ಮಕ್ಕಳು ಸೋಂಕಿಗೆ ತುತ್ತಾಗಿದ್ರೆ, 10 ರಿಂದ 19 ವರ್ಷದೊಳಗಿನ 305 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಗಮನಿಸಬೇಕಾದ ಅಂಶ ಅಂದ್ರೆ ಕಳೆದ 5 ದಿನದಲ್ಲಿ 1338 ಹೊಸ ಸೋಂಕಿನ ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಈ ಪೈಕಿ ಮಕ್ಕಳ ಸಂಖ್ಯೆ 263. ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ಪ್ರಕಾರ, ಕಳೆದ 10 ದಿನಗಳ ಡಾಟ ನೋಡಿದರೆ ಮಕ್ಕಳಲ್ಲಿ ಸೋಂಕಿಗ ಪ್ರಮಾಣ ಏರುಗತಿಯಲ್ಲಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೆಲವೇ ಕೆಲವು ದಿನಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗಬಹುದು.
ಇನ್ನು ಬೆಂಗಳೂರಿನಲ್ಲಿ ಕೊರೋನಾ ಸೋಂಕಿಗೆ ಈ ತನಕ 15,919 ಮಂದಿ ಬಲಿಯಾಗಿದ್ದಾರೆ. ಈ ಪೈಕಿ 9 ವರ್ಷದೊಳಗಿನ 19 ಮಕ್ಕಳು, 19 ವರ್ಷದೊಳಗಿನ 26 ಮಕ್ಕಳು ಸೇರಿದ್ದಾರೆ. ಹೀಗಾಗಿ ಮಕ್ಳಳ ವಿಚಾರದಲ್ಲಿ ಪೋಷಕರು ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ.
Around 250 cases in 5 days: Bengaluru sees spike of Covid cases among youth, children.During the second wave of the Coronavirus pandemic in India, Karnataka reported a high number of patients below 19 years of age.
Discussion about this post