ಸೆಲೆಬ್ರೆಟಿಗಳ ಬದುಕಿನ ಬಗ್ಗೆ ಜನ ಸಾಮಾನ್ಯರಿಗೆ ಇರುವ ಕುತೂಹಲ, ತಮ್ಮ ಬದುಕಿನ ಬಗ್ಗೆ ಇರುತ್ತಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಆದರೇನು ಮಾಡುವುದು.
ಇದೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮ ಗರ್ಭಿಣಿ ಅನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಸೂಯಿಧಾಗ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಅವರು, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕುರ್ಚಿಯಿಂದ ಮೇಲೆ ಏಳಲು ತುಂಬಾ ಒದ್ದಾಡಿದ್ದಾರೆ. ಆಗ ಅವರ ಮುಖದ ಭಾವನೆ ಕೂಡಾ ಸಾಮಾಜಿಕ ಜಾಲದ ಕಣ್ಣಿಗೆ ಗರ್ಭಿಣಿಯಂತೆ ಕಂಡಿದೆ.
ಇನ್ನು ಕೇಳಬೇಕಾ…. ಈ ವಿಡಿಯೋ ವೈರಲ್ ಆಗಿದ್ದು, ಅನುಷ್ಕಾ ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡ್ತಾರೆ ಎಂದು ಹೇಳಲಾಗಿದೆ.
ಇನ್ನು ಈ ವದಂತಿಗೆ ಪುಷ್ಟಿ ನೀಡುವಂತೆ ಅನುಷ್ಕಾ ಇತ್ತೀಚೆಗೆ ಸಿಕ್ಕಾಪಟ್ಟೆ ಸಡಿಲವಾಗಿರುವ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಜೊತೆಗೆ ಸೂಯಿ ಧಾಗ ಸಿನಿಮಾ ನಂತರ ಅವರು ಯಾವುದೇ ಹೊಸ ಪ್ರಾಜೆಕ್ಟ್ ಗಳಿಗೆ ಸಹಿ ಮಾಡಿಲ್ಲ. ಹೀಗಾಗಿ ವಿರಾಟ್ ಅಪ್ಪ ಆಗುವುದು ಖಚಿತ ಎನ್ನಲಾಗಿದೆ.
Discussion about this post