ಈಗಾಗಲೇ ತಮಿಳುನಾಡಿನಲ್ಲಿ ರಾಜ್ಯಪಾಲಬನ್ವಾರಿಲಾಲ್ ಪುರೋಹಿತ್ ವಿರುದ್ಧ ವಿಪಕ್ಷಗಳು ಅಸಮಾಧಾನ ಹೊರಹಾಕುತ್ತಿದೆ. ಇಂಥ ವೇಳೆಯಲ್ಲೇಇಂದು ಸಿದ್ಧಗಂಗಾ ಶ್ರೀಗಳು ಅವರಿಂದಾಗಿಯೇ ಅಣ್ಣಾ ಏರ್ಪೋರ್ಟ್ನಲ್ಲಿ 20 ರಿಂದ 25 ನಿಮಿಷ ಕಾಯಬೇಕಾಗಿ ಬಂದಿದ್ದು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶತಾಯುಷಿ,ನಡೆದಾಡುವ ದೇವರು, ಅನ್ನ, ಅಕ್ಷರ ದಾಸೋಹಿ ಎಂದೇ ಪೂಜಿಸಲ್ಪಡುವ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯದವರು ಯಾರಿದ್ದಾರೆ ಹೇಳಿ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹೀಗೆ ಸಾಲು ಸಾಲು ನಾಯಕರು, ವಿದೇಶೀ ಗಣ್ಯರೂ ಸಹ ಶ್ರೀಗಳ ಹಿರಿಮೆಯನ್ನು ಅರಿತು ದೂರ ದೂರದಿಂದ ತುಮಕೂರಿನ ಮಠಕ್ಕೆ ಆಗಮಿಸಿ ಅವರ ಆಶೀರ್ವಾದ ಪಡೆಯುತ್ತಾರೆ. ಆದರೆ ನೆರೆ ರಾಜ್ಯ ತಮಿಳುನಾಡಿನ ರಾಜ್ಯಪಾಲರುಶ್ರೀಗಳಿಗೆ ಅವಮಾನ ಮಾಡಿದ್ದಾರೆ.
ಶಿವಕುಮಾರ ಸ್ವಾಮಿಗಳನ್ನು ಹೆಚ್ಚಿನ ಚಿಕಿತ್ಸೆಗೆಂದು ಇಂದು ಬೆಳಗ್ಗೆವಿಶೇಷ ಏರ್ ಆಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಗಿತ್ತು. ತುರ್ತು ಚಿಕಿತ್ಸೆಗಾಗಿ ಶ್ರೀಗಳು ಚೆನ್ನೈನ ಮೀನಾಂಬಕ್ಕಂ ಅಣ್ಣಾ ವಿಮಾನ ನಿಲ್ದಾಣ ತಲುಪಿದ್ರೂ ಅಲ್ಲಿನ ರಾಜ್ಯಪಾಲರಕಾರಣದಿಂದಾಗಿ ಏರ್ ಪೋರ್ಟ್ ನಲ್ಲಿಯೇ 20-25 ನಿಮಿಷ ಕಾಯಬೇಕಾಗಿ ಬಂದಿದೆ.
ಯಾಕೆಂದ್ರೆ ಅದೇ ಸಮಯದಲ್ಲಿ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ದೆಹಲಿಗೆ ಪ್ರಯಾಣ ಬೆಳಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ಹೊರ ಹೋಗಲು ಅವರ ಭದ್ರತಾಸಿಬ್ಬಂದಿ ಅವಕಾಶ ನೀಡಿಲ್ಲ. ಅಷ್ಟೇ ಅಲ್ಲದೇ ಶ್ರೀಗಳು ವಿಮಾನ ನಿಲ್ದಾಣದಲ್ಲೇ ಇದ್ರೂ ಅವರನ್ನು ಭೇಟಿಯಾಗದೇ ತೆರಳಿದ್ದಾರೆ.
ರಾಜ್ಯಪಾಲರು ಅಲ್ಲಿಂದ ತೆರಳುವ ತನಕ ಶ್ರೀಗಳು ಏರ್ ಪೋರ್ಟ್ ನಲ್ಲಿಯೇ ಇರಬೇಕಾಯ್ತು. ರಾಜ್ಯಪಾಲರು ತೆರಳಿದ ನಂತರ ಶ್ರೀಗಳನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ರಾಜ್ಯಪಾಲರ ಈ ನಡೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅವರುಎಷ್ಟೇ ದೊಡ್ಡವರಾಗಿದ್ದರೂ, ತುರ್ತು ಕೆಲಸವಿದ್ದರೂ ಶ್ರೀಗಳಿಗೆ ಅವಮಾನಕರವಾಗಿ ನಡೆದುಕೊಂಡಿದ್ದು ತಪ್ಪು. ಅಲ್ಲದೇಶ್ರೀಗಳು ಏರ್ ಪೋರ್ಟ್ ಗೆ ಬರುವ ವಿಚಾರ ರಾಜ್ಯಪಾಲರಿಗೆ ಮೊದಲೇ ತಿಳಿದಿರಲಿಲ್ಲವೇ? ಸಭ್ಯತೆಗಾಗಿಯಾದರೂಸ್ವಾಮೀಜಿಯವರನ್ನು ಭೇಟಿ ಮಾಡಬಹುದಿತ್ತುತಾನೇ.
ಇಂತಹ ರಾಜ್ಯಪಾಲರನ್ನು ಕೇಂದ್ರ ಹಿಂದಕ್ಕೆ ಕರೆಸಿಕೊಳ್ಳುವುದೇ ಬೆಟರ್. ಇಲ್ಲವಾದರೆ ತಕ್ಕ ದಂಡವನ್ನು ಖಂಡಿತಾ ತೆರಬೇಕಾಗುತ್ತದೆ.


Discussion about this post