Sunday, April 18, 2021

ಟಿಟಿಡಿ ಚಾನೆಲ್ ಕಚೇರಿಯಲ್ಲಿ ನೀಲಿ ಚಿತ್ರ ವೀಕ್ಷಣೆ – ಸಂಪಾದಕ ಸೇರಿ ಮೂವರು ಮನೆಗೆ

Must read

- Advertisement -
- Advertisement -

ತಿರುಪತಿ : ತಿರುಮಲ ತಿರುಪತಿ ದೇವಸ್ಥಾನಂ ಅಡಿ ಕಾರ್ಯನಿರ್ವಹಿಸುತ್ತಿರುವ ಶ್ರೀವೆಂಕಟೇಶ್ವರ ಭಕ್ತಿ ವಾಹಿನಿಯ ಮೂವರು ಹಿರಿಯ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಕಚೇರಿಯ ವೇಳೆಯಲ್ಲಿ ಮೂವರು ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಆಡಳಿತ ಮಂಡಳಿ ಈ ಮೂವರನ್ನೂ ವಜಾಗೊಳಿಸಿದೆ. ದುರಂತ ಅಂದ್ರೆ ವಜಾಗೊಂಡವರಲ್ಲಿ ವಾಹಿನಿಯ ಸಂಪಾದಕ ಜಿ.ಕೃಷ್ಣರಾವ್ ಕೂಡಾ ಸೇರಿದ್ದಾರೆ. ಇವರೊಂದಿಗೆ ಹಿರಿಯ ವ್ಯವಸ್ಥಾಪಕ ಸೋಮಶೇಖರ್, ಎಂ.ಎಸ್.ಎಸ್ ಮುರಳಿ ಕೃಷ್ಣ ಎಂಬವರು ಕೂಡಾ ವಜಾಗೊಂಡಿದ್ದಾರೆ.

ಇನ್ನು ವಾಹಿನಿಯ ಕೆಲ ಸಿಬ್ಬಂದಿಗಳು ಸಂಸ್ಥೆಯ ಕಂಪ್ಯೂಟರ್ ಅನ್ನು ದುರುಪಯೋಗಗೊಳಿಸುತ್ತಿದ್ದಾರೆ ಅನ್ನುವ ದೂರುಗಳು ಬಂದಿದ್ದು, ಈ ಸಂಬಂಧ ತನಿಖೆಗಾಗಿ ಪ್ರತ್ಯೇಕ ಕಮಿಟಿಯೊಂದನ್ನು ರಚಿಸಲಾಗಿದೆ. ಪ್ರಮುಖವಾಗಿ ಕಚೇರಿ ವೇಳೆಯಲ್ಲಿ ಸಿಬ್ಬಂದಿ ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

- Advertisement -
- Advertisement -
- Advertisement -

Latest article