ಬೆಂಗಳೂರು : ನಟಿ, ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಕಾವ್ಯ ಶಾಸ್ತ್ರಿ I am in love ಅನ್ನೋದನ್ನ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿರುವ ಅವರು ಹುಡುಗ ಯಾರು ಅನ್ನುವುದನ್ನು ಕೂಡಾ ತೆರೆದಿಟ್ಟಿದ್ದಾರೆ.
ಕಿರುನಗೆ, ತುಂಟತನ, ಸಿಂಪಲ್ ಸೌಂದರ್ಯಮೂಲಕ ಗಮನ ಸೆಳೆಯುವ ಕಾವ್ಯಳನ್ನು ವರಿಸಲಿರುವ ಹುಡುಗನ ಹೆಸರು ಸೂರಜ್ ರಾಧಾಕೃಷ್ಣ.
ಸೂರಜ್ ಕನ್ನಡ ಮಾಧ್ಯಮ ಲೋಕದ ಅನೇಕರಿಗೆ ಪರಿಚಯಸ್ಥನಾಗಿದ್ದು, ಪ್ರಸ್ತುತ ಕ್ರಿಯೇಟಿವ್ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಕಾವ್ಯ ಹಾಗೂ ಸೂರಜ್ ಜೊತೆಗೆ ಕಲಿತವರು. ಕಲಿಕೆ ಮುಕ್ತಾಯದ ಬಳಿಕ ಇವರಿಬ್ಬರ ನಡುವಿನ ಸಂಪರ್ಕ ತಪ್ಪಿ ಹೋಗಿತ್ತು.
ಕೆಲ ವರ್ಷದ ಹಿಂದೆ ಅಚಾನಕ್ ಅನ್ನುವಂತೆ ಭೇಟಿಯಾದ ಇಬ್ಬರು ಸತತ ಸಂಪರ್ಕದಲ್ಲಿದ್ದರು. ಹೀಗಾಗಿ ಹಳೆಯ ಕ್ಲಾಸ್ ಮೇಟ್ ಗಳ ನಡುವೆ ಪ್ರೀತಿ ಬೆಳೆದಿತ್ತು.
Discussion about this post