Monday, April 19, 2021

ಅನಂತ ಕುಮಾರ್ ಹೆಗಡೆ ಸತ್ತರೇನು..? ಉಳಿದರೇನು… ನಾಲಗೆ ಹರಿಬಿಟ್ಟ ಮಾಜಿ ಸಚಿವ

Must read

- Advertisement -
- Advertisement -

ಉತ್ತರ ಕನ್ನಡ : ಸಂಸದ ಅನಂತ ಕುಮಾರ್ ಸತ್ತರೇನು, ಉಳಿದರೇನು. ಗೆದ್ದರೂ ಅವನು ಕಣ್ಣಿಗೆ ಕಾಣಿಸುವುದಿಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ನಾಲಗೆ ಹರಿ ಬಿಟ್ಟಿದ್ದಾರೆ.

ಕಾರವಾರದಲ್ಲಿ ಮಾತನಾಡಿದ ಅವರು ಅನಂತ ಕುಮಾರ್ ಅನಾರೋಗ್ಯದ ಕಾರಣದಿಂದ ಬಿಜೆಪಿಯಲ್ಲಿ ಅವಕಾಶ ಸಿಗುತ್ತದೆ ಅಂದುಕೊಂಡಿದ್ದೆ. ನನ್ನ ಸ್ನೇಹಿತರು ಇದೇ ಕಾರಣಕ್ಕೆ ಬಿಜೆಪಿ ಸೇರುವಂತೆ ಸಲಹೆ ನೀಡಿದ್ದರು ಆದರೆ ಅವರು ಇನ್ನೂ ಗಟ್ಟಿಯಾಗಿದ್ದಾರೆ ಅಂದಿದ್ದಾರೆ.

ಅನಂತಕುಮಾರ್ ಮಲಗಿದ್ದಾರೆ. ಹೇಗೆ 5 ವರ್ಷ ಮುಖ ಕಾಣಿಸೋದಿಲ್ಲ. 100%  ಏನೋ ಆಗಿರಬೇಕು. ಬೋನ್ ಕ್ಯಾನ್ಸರ್ ಆಗಿದೆ, ಆದಾಗಿದೆ, ಇದಾಗಿದೆ ಅನ್ನುವ ಎಲ್ಲಾ ರೀತಿಯ ಸುದ್ದಿಗಳು ಬರ್ತಾ ಇದೆ.

ಅನಂತ ಕುಮಾರ್ ಕಾಣಿಸಿಕೊಳ್ಳಬೇಕಾದರೆ ಎಲ್ಲಾದರೂ ಹಿಂದೂ ಮುಸ್ಲಿಂ ಗಲಾಟೆಯಾಗಬೇಕು,ಯಾರಾದರೂ ಹಿಂದುಗಳು ಸಾಯಬೇಕು, ಅಂತ ಪ್ರಸಂಗ ಬಂದಾಗ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಅಸ್ನೋಟಿಕರ್ ಟೀಕಿಸಿದ್ದಾರೆ.

- Advertisement -
- Advertisement -
- Advertisement -

Latest article