ಜುಲೈ 1ರಿಂದ ದೇಶಾದ್ಯಂತ ಅಮೂಲ್ ಹಾಲಿನ ದರ ಲೀಟರ್ಗೆ 2 ರೂಪಾಯಿ ಏರಿಕೆಯಾಗಲಿದೆ. ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (GCMMF) ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತಾಜಾ, ಗೋಲ್ಡ್, ಶಕ್ತಿ, ಟೀ ಸ್ಪೆಷನ್ ಸೇರಿದಂತೆ ಅಮೂಲ್ ಹಾಲಿನ ಎಲ್ಲಾ ಬ್ರಾಡ್ಗಳ ಬೆಲೆ ಏರಿಕೆಯಾಗಲಿದೆ.
ಒಂದು ವರ್ಷ ಏಳು ತಿಂಗಳುಗಳ ನಂತರ ಅಮೂಲ್ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದ್ದು, ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳದಿಂದ ಬೆಲೆ ಏರಿಕೆ ಅನಿವಾರ್ಯ ಅಂದಿದೆ.
ಪ್ಯಾಕೇಜಿಂಗ್ ವೆಚ್ಚವು ಶೇ30 ರಿಂದ 40, ಸಾರಿಗೆ ವೆಚ್ಚವು ಶೇ30, ವಿದ್ಯುತ್ ವೆಚ್ಚ ಶೇ30 ರಷ್ಟು ಏರಿಕೆಯಾಗಿದೆ ಹೀಗಾಗಿ ಬೆಲೆ ಏರಿಸದೆ ವಿಧಿಯಿಲ್ಲ ಅನ್ನುವುದು ಅಧಿಕಾರಿಗಳ ವಾದ.
Discussion about this post