ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಹಿಂದಿ ಭಾಷೆಗೆ ಭಾರತವನ್ನು ಬೆಸೆಯುವ ಸಾಮರ್ಥ್ಯವಿದೆ. ಹಿಂದಿಯೂ ಭಾರತವನ್ನು ಜಾಗತಿಕವಾಗಿ ಗುರುತಿಸುವ ಭಾಷೆಯಾಗಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ದಿವಸ್ ಅಂಗವಾಗಿ ಟ್ವೀಟ್ ಮಾಡಿರುವ ಅವರು, ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಪರಿಗಣಿಸುವ ಅಗತ್ಯವಿದೆ ಅಂದಿದ್ದಾರೆ.
‘ಮಾತೃಭಾಷೆ ಬಳಕೆಯನ್ನು ಹೆಚ್ಚಿಸಿ, ಇದರೊಂದಿಗೆ ಹಿಂದೀ ಭಾಷೆ ಪ್ರಯೋಗಿಸಿ ದೇಶದ ಒಂದೇ ಭಾಷೆ ಎಂಬ ಗಾಂಧೀಜಿ ಹಾಗೂ ಸರ್ದಾರ್ ಪಟೇಲ್ ಕನಸು ನನಸಾಗಿಸಿ’ ಎಂದು ಮನವಿ ಮಾಡಿಕೊಂಡಿರುವ ಶಾ, “ಭಾರತದ ಅನೇಕ ಭಾಷೆ ಮತ್ತು ಮಾತುಗಳು ದೇಶದ ಬಹುದೊಡ್ಡ ಶಕ್ತಿಯಾಗಿವೆ. ಆದರೆ, ದೇಶದ ಒಂದು ಭಾಷೆ ಹೇಗಿರಬೇಕೆಂದರೆ ವಿದೇಶಿ ಭಾಷೆಗಳು ನಮ್ಮ ಮೇಲೆ ಸವಾರಿ ಮಾಡಬಾರದು. ಈ ಕಾರಣದಿಂದಾಗಿಯೇ ನಮ್ಮ ಸಂವಿಧಾನ ನಿರ್ಮಾತೃಗಳು ಹಿಂದಿಯನ್ನು ರಾಜಭಾಷೆಯನ್ನಾಗಿ ಸ್ವೀಕರಿಸಿದ್ದರು.” ಅಂದಿದ್ದಾರೆ.
Buy Beardo Mooch Swag Mug at Rs.349
ಇನ್ನು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಮಿತ್ ಶಾ, ವಿದೇಶಿ ಭಾಷೆಗೆ ಯಾವುದೇ ಕಿಮ್ಮತ್ತು ಕೊಡಬಾರದೆಂದು ನಮ್ಮ ಸ್ವಾತಂತ್ರ್ಯ ಸೇನಾನಿಗಳು ಹಿಂದಿಯನ್ನು ‘ರಾಷ್ಟ್ರ ಭಾಷೆ’ಯಾಗಿ ನೋಡಲಾರಂಭಿಸಿದರು. ನಮ್ಮ ದೇಶದಲ್ಲಿ ವಿಭಿನ್ನ ಭಾಷೆಗಳಿವೆ. ಇವುಗಳಿಗೆ ತಮ್ಮದೇ ಆದ ಮಹತ್ವವಿದೆ. ಆದರೆ ವಿಶ್ವದಲ್ಲಿ ಗುರುತಿಸಿಕೊಳ್ಳಬೇಕಾದರೆ ದೇಶಕ್ಕೊಂದೇ ಭಾಷೆ ಇರುವುದು ಅಗತ್ಯ’ ಎಂದಿದ್ದಾರೆ.
Discussion about this post