ತ್ರಿವಳಿ ತಲಾಖ್, ಕಾಶ್ಮೀರಕ್ಕೆ ಮರು ಹುಟ್ಟು ಸೇರಿದಂತೆ
ಅನೇಕ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿರುವ ಕೇಂದ್ರ ಸರ್ಕಾರ ಇದೀಗ ಪಾಕ್ ಅಕ್ರಮಿತ ಕಾಶ್ಮೀರ
ಮತ್ತು ಏಕ ರೂಪದ ನಾಗರಿಕ ಸಂಹಿತೆ ಕಡೆ ಕಣ್ಣು ನೆಟ್ಟಿದೆ.
ಈ ನಡುವೆ ಕಾಶ್ಮೀರದಲ್ಲಿ ಇತಿಹಾಸ ಸೃಷ್ಟಿಸಿರುವ ಗೃಹ ಸಚಿವ ಅಮಿತ್ ಶಾ, ಭಾರತಕ್ಕೆ ಅಕ್ರಮವಾಗಿ ನುಸುಳಿ ದೇಶದ ಭದ್ರತೆಗೆ ಧಕ್ಕೆ ತಂದಿರುವ ಬಾಂಗ್ಲಾ ಮಂದಿಯನ್ನು ಹೊರಗಟ್ಟುವ ಕೆಲಸಕ್ಕೆ ಹೈ ಹಾಕಿದ್ದಾರೆ.
ಅಮಿತ್ ಶಾ ಕಣ್ಣು ಇದೀಗ ಬಾಂಗ್ಲಾ ವಲಸಿಗರ ಮೇಲೆ... 1
ಈ ಸಂಬಂಧ ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಎನ್ ಸಿಆರ್ ಮೂಲಕ ಮೂಲ ನಿವಾಸಿಗಳಿಗೆ ರಕ್ಷಣೆ ನೀಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಈ ವಿಚಾರವಾಗಿ ಬಾಂಗ್ಲಾ ಜತೆಗೂ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿದೆ.
ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಗೃಹ ಸಚಿವ ಅಸಾದುಜಮಾನ್ ಖಾನ್ ಅವರ ಜೊತೆ ಮಾತುಕತೆ ನಡೆಸಿದ ಶಾ, ಬುಧವಾರ ಈ ವಿಚಾರದ ಬಗ್ಗೆ ಚರ್ಚಿಸಿದ್ದಾರೆ.
ಮ್ಯಾನ್ಮಾರ್ ಅಕ್ರಮ ವಲಸಿಗರು ಅಥವಾ ರೊಹಿಂಗ್ಯ ಮುಸಲ್ಮಾನರ ಅಕ್ರಮ ಪ್ರವೇಶ ಸಮಸ್ಯೆಯನ್ನು ಬಾಂಗ್ಲಾದೇಶ ನಿಭಾಯಿಸಲು ಭಾರತ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಲಾಗಿದೆ.
Discussion about this post