ಉಜ್ಜಯಿನಿ : ಉತ್ತರ ಭಾರತದ ಮಂದಿರಗಳಲ್ಲಿ ವಸ್ತ್ರ ಸಂಹಿತೆ ಹೇರುವ ಸಂಪ್ರದಾಯಗಳಿಲ್ಲ. ದಕ್ಷಿಣ ಭಾರತದ ದೇವಾಲಯಗಳಲ್ಲಿ ಮಾತ್ರ ವಸ್ತ್ರ ಸಂಹಿತೆ ಜಾರಿ ಮಾಡುವ ಸಂಪ್ರದಾಯವಿದೆ.
ಈ ಕಾರಣದಿಂದ ಆಯೋಧ್ಯೆ ಶ್ರೀರಾಮಮಂದಿರದಲ್ಲೂ ವಸ್ತ್ರಸಂಹಿತೆ ಇರೋದಿಲ್ಲ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ಉಜ್ಜಯಿನಿಯ ಮಹಾಕಾಲೇಶ್ವರ ದರ್ಶನದ ಬಳಿಕ ಮಾತನಾಡಿದ ಅವರು ಶ್ರೀರಾಮಂದಿರಕ್ಕೆ ಭೇಟಿ ನೀಡುವವರಿಗೆ ಡ್ರೆಸ್ ಕೋಡ್ ವಿಧಿಸುವ ಕುರಿತಂತೆ ನಡೆಯುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ : ಉತ್ತರ ಭಾರತದ ಮಂದಿರಗಳಲ್ಲಿ ವಸ್ತ್ರ ಸಂಹಿತೆ ಹೇರುವ ಸಂಪ್ರದಾಯಗಳಿಲ್ಲ. ದಕ್ಷಿಣ ಭಾರತದ ದೇವಾಲಯಗಳಲ್ಲಿ ಮಾತ್ರ ವಸ್ತ್ರ ಸಂಹಿತೆ ಜಾರಿ ಮಾಡುವ ಸಂಪ್ರದಾಯವಿದೆ.

ಹೀಗಾಗಿ ಆಯೋಧ್ಯೆಯ ಶ್ರೀರಾಮಮಂದಿರದಲ್ಲಿ ಡ್ರೆಸ್ ಕೋಡ್ ತರೋದಿಲ್ಲ ಎಂದು ಚಂಪತ್ ರಾಯ್ ಹೇಳಿದ್ದಾರೆ.
ಹೆಣ್ಣು ಮಕ್ಕಳು ಶಾಲೆ ಮನೆಗಳಲ್ಲಿ ಜೀನ್ಸ್ ಧರಿಸಬಹುದಾದ್ರೆ ಮಂದಿರಕ್ಕೆ ಜೀನ್ಸ್ ಧರಿಸಿ ಪ್ರವೇಶಿಸಬಾರದ್ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಮಂದಿರದಲ್ಲಿ ಯಾವುದೇ ವಸ್ತ್ರ ಸಂಹಿತೆ ಅನ್ವಯವಾಗೋದಿಲ್ಲ ಅಂದಿರುವ ಚಂಪತ್ ರಾಯ್, ಮಹಿಳೆಯರಿಗೆ ಜೀನ್ಸ್ ಧರಿಸಲು ಸಂಪೂರ್ಣ ಅಧಿಕಾರ ಇರುತ್ತದೆ ಅಂದಿದ್ದಾರೆ.
Discussion about this post