Monday, April 19, 2021

ಧರ್ಮಸ್ಥಳದ ಧರ್ಮಾಧಿಕಾರಿಯವರಿಂದ ಎಕರೆಗಟ್ಟಲೇ ಜಮೀನು ಕಬಳಿಸೋ ಹುನ್ನಾರ… ದಾಖಲೆಗಳು ಹೇಳುವುದೇನು..?

Must read

- Advertisement -
- Advertisement -

ಬೆಂಗಳೂರು : ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಯವರು ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಅನ್ನುವ ಆರೋಪದ ವಿರುದ್ಧ ಶ್ರೀಕ್ಷೇತ್ರದ ಭಕ್ತರು ಸಿಡಿದೆದ್ದಿದ್ದಾರೆ.

ಇದೊಂದು ಸತ್ಯಕ್ಕೆ ದೂರವಾದ ಆರೋಪವಾಗಿದ್ದು, ಆಧಾರ ರಹಿತವಾದ ಆರೋಪ ಎಂದು ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್, ಕರವೇ ನಗರ ಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಹೋರಾಟಗಾರ ಎನ್.ವಿ. ಲಕ್ಷ್ಮಿನಾರಾಯಣ, ಗುರುವಾಯನಕೆರೆಯ ಸೋಮನಾಥ ನಾಯಕ್ ಅನ್ನುವ ವ್ಯಕ್ತಿ  ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಕೆಲವು ಪತ್ರಿಕೆಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಜಮೀನಿನ ಕುರಿತು ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.

ಆದರೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರು ಇಂತಹ ಯಾವುದೇ ಹುನ್ನಾರ ಮಾಡಿಲ್ಲ.

 ಅಪಪ್ರಚಾರ ಮಾಡುವ ಗುರುವಾಯನಕೆರೆಯ ಸೋಮನಾಥ್ ನಾಯಕ್ ಮಾಡಿರುವ ಆರೋಪದ ಸತ್ಯಾಂಶ ತಿಳಿಯುವ ಸಲುವಾಗಿ ಶ್ರೀಕ್ಷೇತ್ರಕ್ಕೆ ಸಂಬಂಧಿಸಿದ ಜಮೀನುಗಳ ಪಹಣಿ ಪತ್ರಿಕೆಗಳನ್ನು ಪರಿಶೀಲನೆ ನಡೆಸಲಾಗಿದೆ.

1970 ರ ದಶಕದಿಂದ 2021 ರ ವರೆಗೆ ದಸ್ತಾವೇಜ್ ನಲ್ಲಿ ದಾಖಲಾಗಿರುವ ಅಂದರೆ 51 ವರ್ಷದ ಪಹಣಿ ಪತ್ರಿಕೆಗಳನ್ನು ಕೂಲಂಕುಷವಾವಾಗಿ ಪರಿಶೀಲಿಸಿ ಮಾಡಿದಾಗ ಎಲ್ಲಿಯೂ ದೇವರ ಹೆಸರಿನ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ಬರೆಸಿಕೊಂಡಿರುವುದು ಕಂಡು ಬಂದಿಲ್ಲ.

ಬೆಳ್ತಂಗಡಿ ಭೂ-ನ್ಯಾಯ ಮಂಡಳಿಯ ಆದೇಶದ ಪ್ರತಿಯನ್ನು ಪಡೆದುಕೊಂಡು ಅವಲೋಕಿಸಿದಾಗ ಅದರಲ್ಲಿಯೂ ಕೂಡ ದೇವರ ಹೆಸರಿನಲ್ಲಿರುವ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವ ಯಾವುದೇ ಕೃತ್ಯದ ಉಲ್ಲೇಖ ಇರುವುದಿಲ್ಲ. ಬದಲಾಗಿ ಹೆಗ್ಗಡೆಯವರಲ್ಲಿ ಹೆಚ್ಚುವರಿ ಜಮೀನು ಇಲ್ಲ ಅಂದರೆ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿ ಇಲ್ಲ.

ಎಲ್ಲವೂ ಪಾರದರ್ಶಕವಾಗಿದ್ದು ಸದರೀ ಸರ್ಕಾರದ ದಸ್ತಾವೇಜಿನ ದಾಖಲೆಯಲ್ಲಿ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿ ಇಲ್ಲ ಎನ್ನುವ ಆದೇಶ ಮಾತ್ರ ಇದೆ.

ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಮೈಸೂರು ಹೈಕೋರ್ಟ್ ಆದೇಶದಲ್ಲಿಯೂ ಕೂಡ ಹೆಗ್ಗಡೆಯವರು ಪರಂಪರಾಗತವಾಗಿ ಸಾವಿರಾರು ಎಕರೆ ಜಮೀನು ಹೊಂದಿದವರಾಗಿದ್ದಾರೆ.

ರಾಜ್ಯದ ಯಾವುದೇ ದಾಖಲೆ ನೋಡಿದರೂ ದೇವರ ಆಸ್ತಿಯನ್ನು ಹೆಗ್ಗಡೆಯವರು ಬರೆಸಿಕೊಂಡಿದ್ದಾರೆ ಎಂಬ ಅಂಶ ಕಂಡು ಬರುವುದಿಲ್ಲ. ಅಲ್ಲದೇ ತಮ್ಮ ಹತ್ತಿರ ಇರುವ ಸಾವಿರಾರು ಎಕರೆ ಭೂಮಿಯನ್ನು ಈಗಾಗಲೇ ಬಡವರಿಗೆ ಹಂಚಿರುವ ಹೆಗ್ಗಡೆಯವರು ಜಾತ್ಯಾತೀತ ಮನೋಧರ್ಮಭಾವ ವುಳ್ಳವರಾಗಿರುವ ಪೂಜ್ಯರು ಇಂದಿಗೂ ಕೂಡ ಮಾನವ ಧರ್ಮೋದ್ಧಾರಕರಾಗಿದ್ದಾರೆ

ನೇತ್ರಾವತಿ ತಟದಲ್ಲಿರುವ ಧರ್ಮಸ್ಥಳದ ಶ್ರೀ ಕ್ಷೇತ್ರ ಸಾರಿ ಸಾರಿ ಹೇಳುತ್ತ ಬಂದಿದೆ. ಆರೋಪ ಮಾಡುವವರ ಚರಿತ್ರೆಯನ್ನು ಜಾಲಾಡಿದಾಗ ಇದರ ಹಿಂದೆ ಕಾಣದ ಕೈಗಳ ನಿಗೂಢವಾದ ರಹಸ್ಯವೇ ಇದೆ. ಆರೋಪ ಮಾಡಿದವರ ಚರಿತ್ರೆ ಕೆದಕುತ್ತ ಸಾಗಿದಂತೆ ಅವರ ಕರ್ಮಕಾಂಡ ಹೇಳತೀರದು. ಬಡವರನ್ನು ವಂಚಿಸಿ ಸರಕಾರವನ್ನೂ ವಂಚಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎನ್ನುವ ಆರೋಪಗಳಿವೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆಯವರ ಮೇಲೆ ಅನಗತ್ಯ ಆರೋಪ ಮಾಡುತ್ತಿರುವ ಇವರ ಉದ್ದೇಶ ಬೇರೆಯದೇ ಇದೆ.  ಮತ್ತೊಮ್ಮೆ ಇಂತಹ ಆಧಾರ ರಹಿತ ಹಾಗೂ ಸತ್ಯಕ್ಕೆ ದೂರವಾದ ಆರೋಪ ಮಾಡಬಾರದೆಂದು ಈ ಮೂಲಕ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಇವರು ಹೇಳಿದ್ದಾರೆ.

- Advertisement -
- Advertisement -
- Advertisement -

Latest article