ಒಲಿಂಪಿಕ್ಸ್ ನಲ್ಲಿ ಮೂರು ಸಲ ಚಿನ್ನ ಗೆದ್ದಿರುವ ಈಜುಗಾರ್ತಿ ಅಲ್ಲಾ ಶಿಶ್ಕಿನ ತನ್ನ ಗೆಲುವಿನ ಗುಟ್ಟು ಸೆಕ್ಸ್ ನಲ್ಲಿ ಅಡಗಿದೆ ಅಂದಿದ್ದಾರೆ. Sex is the secret of my energy ಅಂದಿರುವ ಅವರು ಈ ಬಗ್ಗೆ ತಾವೇ ನಡೆಸಿದ ಸಂಶೋಧನೆಯನ್ನು ತೆರೆದಿಟ್ಟಿದ್ದಾರೆ.
ರಷ್ಯಾದ ಸ್ಫೋರ್ಟ್ ಎಕ್ಸ್ ಪ್ರೆಸ್ ಅನ್ನುವ ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟಿರುವ ಅವರು, ಶಕ್ತಿ, ಸಾಮರ್ಥ್ಯ explosive power ಬೇಕು ಅನ್ನುವುದಾದರೆ ಸೆಕ್ಸ್ ನೀಡುತ್ತದೆ ಅನ್ನುವುದನ್ನು ನಾನು ಕೆಲವು ಸಂಶೋಧನೆಗಳ ಮೂಲಕ ತಿಳಿದುಕೊಂಡಿದ್ದೆ. ವೈಜ್ಞಾನಿಕ ಜಗತ್ತು ಕೂಡಾ if you need explosive power, you have to have sex ಅಂದಿದೆ. ಹೀಗಾಗಿ ನಾನು ನನ್ನ ವೈದ್ಯರ ಜೊತೆಗೆ ಇದನ್ನು ಚರ್ಚಿಸಿದಾಗ ಅವರು ಹೌದು ಅಂದಿದ್ದಾರೆ. ಹಾಗಂತ ಇದು ಎಲ್ಲಾ ಸಂದರ್ಭಗಳಿಗೆ ಅನ್ವಯಿಸುವುದಿಲ್ಲ. ಒಂದು ವೇಳೆ ಸುದೀರ್ಘ ಸಮಯದ ಕೆಲಸಗಳಿದ್ದ ಸಂದರ್ಭದಲ್ಲಿ ಸಾಮರ್ಥ್ಯಕ್ಕಾಗಿ ಸೆಕ್ಸ್ ಅನ್ನು ಅವಲಂಭಿಸಿದಿರುವುದೇ ಉತ್ತಮ ಅಂದಿದ್ದಾರೆ.
physical intercourse ಅನ್ನುವುದು ನಮ್ಮಲ್ಲಿ aggression ಅನ್ನು ಹೆಚ್ಚಿಸುತ್ತದೆ. ಹೀಗಾಗಿ ಹಲವು ಅಥ್ಲೇಟ್ ಗಳ ಉತ್ತಮ ಪ್ರದರ್ಶನಕ್ಕೂ ಇದು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಯಾರಿಗೆ muscle strengthನ ಅವಶ್ಯಕತೆ ಇರುತ್ತದೋ ಅವರಿಗೆ ಈ physical intercourse ಬಲ ತಂದುಕೊಡುತ್ತದೆ ಅಂದಿದ್ದಾರೆ. ಹಾಗಂತ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವೇಳೆ ನಿಮ್ಮ ಮನಸ್ಸಿನ ಮಾತನ್ನು ಮೊದಲು ನೀವು ಆಲಿಸಿ, ಸೆಕ್ಸ್ ಸಹಾಯ ಮಾಡುತ್ತದೆ ಎಂದು ಅನ್ನಿಸಿದ್ರೆ ಮಾತ್ರ ಸೆಕ್ಸ್ ಮಾಡಿ ಎಂದು ಅವರು ಸಲಹೆ ಕೊಟ್ಟಿದ್ದಾರೆ.
ಇದು ವೇಳೆ ಈಜುಪಟುಗಳ ದೇಹದ ಆಕಾರದ ಬಗ್ಗೆ ಮಾತನಾಡಿರುವ ಅಲ್ಲಾ ಶಿಶ್ಕಿನ, breasts help keep you afloat ಅನ್ನುವುದರಲ್ಲಿ ಅರ್ಥವೇ ಇಲ್ಲ. ಇದೊಂದು ಸುಳ್ಳು ನಂಬಿಕೆಯಾಗಿದ್ದು, ದೊಡ್ಡ ಎದೆಯೊಂದಿಗೆ ಈಜುವುದು ಕಷ್ಟಕರವಾಗಿದೆ. ಹಾಗಂತ ಆಪರೇಷನ್ ಮಾಡಿಸಿಕೊಳ್ಳುವುದು ಕೂಡಾ ಸುಲಭದ ಮಾತಲ್ಲ, ಇದೊಂದು ಕಠಿಣ ಹಾಗೂ ದುಬಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Discussion about this post