ಅಳಿದು ಉಳಿದವರು ಈ ಚಿತ್ರದ ಫಸ್ಟ್ ಲುಕ್ ನ ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದರು. ಫಸ್ಟ್ ಲುಕ್ ನಿಂದಲೇ ಚಿತ್ರತಂಡ ವಿಶೇಷವಾದ ಕುತೂಹಲವನ್ನು ಹುಟ್ಟಿಸಿತ್ತು. ಅಳಿದು ಉಳಿದವರು ಟ್ರೈಲರ್ ನೋಡಿದ ರಕ್ಷಿತ್ ಶೆಟ್ಟಿ ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ ಅಂದಿದ್ದರು.
ಇದೀಗ ರಕ್ಷಿತ್ ಅವರ ಮಾತು 100 ಪರ್ಸೆಂಟ್ ನಿಜವಾಗಿದೆ. ಇತ್ತೀಚೆಗಷ್ಟೇ ಲೂಸಿಯಾ ಪವನ್ ಕುಮಾರ್ ಅವ್ರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಳಿದು ಉಳಿದವರು ಚಿತ್ರದ ಅಫಿಶಿಯಲ್ ಟ್ರೈಲರ್ ನ ಲಾಂಚ್ ಮಾಡಿದ್ರು. ಟ್ರೈಲರ್ ರಿಲೀಸ್ ಆಗ್ತಿದ್ದಂತೆ. ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಟ್ರೈಲರ್ ನೋಡಿದವರೆಲ್ಲ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ. ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬರ್ತಿವೆ.
ಅರವಿಂದ್ ಶಾಸ್ತ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬೆದ್ರ ವೆಂಚರ್ಸ್ ಮತ್ತು ಪಿವಿಆರ್ ಪಿಚ್ಚರ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಅಶುಬೆದ್ರ ಚೊಚ್ಚಲ ಬಾರಿಗೆ ನಿರ್ಮಾಣದೊಂದಿಗೆ ನಾಯಕ ನಟನಾಗಿ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ಇವರಿಗೆ ಸಂಗೀತಾ ಭಟ್, ಪವನ್ ಕುಮಾರ್, ಅತುಲ್ ಕುಲರ್ಕಣಿ, ಬಿ ಸುರೇಶ್, ಅರವಿಂದ್ ರಾವ್ ಪ್ರಮುಖ ಪಾತ್ರಗಳಲ್ಲಿ ಸಾಥ್ ಕೊಟ್ಟಿದ್ದಾರೆ. ಮಿಧುನ್ ಮುಕುಂದ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಅಳಿದು ಉಳಿದವರು ಕಥೆ ಒಂದು ಜನಪ್ರಿಯ ವಾಹಿನಿಯ, ಜನಪ್ರಿಯ ಕಾರ್ಯಕ್ರಮದ ನೂರನೇ ಸಂಚಿಕೆಯನ್ನು ರೂಪಿಸೋ ಸಂದರ್ಭದಲ್ಲಿ ಎದುರಾಗುವ ಸವಾಲುಗಳು, ಟಿ.ಆರ್.ಪಿಗಾಗೀ ಪಡುವ ಪರಿಪಾಟಲುಗಳನ್ನೇ ಕಥಾಹಂದರವನ್ನಾಗಿಸಿ ಮಾಡಿರೋ ಔಟ್ ಅಡ್ ಔಟ್ ಸಸ್ಪೆನ್ಸ್ ಥ್ರಿಲ್ಲಿಂಗ್ ಎಂಟರ್ಟೈನಿಂಗ್ ಸಬ್ಜೆಕ್ಟ್. ಸದ್ಯ ಅಳಿದು ಉಳಿದವರು ಟ್ರೈಲರ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಚಿತ್ರವು ಇದೇ ಡಿಸೆಂಬರ್ 6ನೇ ತಾರೀಖು ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.
Discussion about this post