2019ರ ಅಂತ್ಯ ಪ್ರಾರಂಭವಾಗುವ ಹೊತ್ತಿಗೆ ಅಳಿದು ಉಳಿದವರು ಚಿತ್ರ ತೆರೆ ಕಾಣಲಿದೆ. ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಚಿತ್ರದ ಫಸ್ಟ್ ಲುಕ್ ನ ರಿಲೀಸ್ ಮಾಡಿದ್ರು.
ಅಳಿದು ಉಳಿದವರು ಚಿತ್ರದ ಫಸ್ಟ್ ಲುಕ್ ನೋಡಿದ ರಕ್ಷಿತ್ ಶೆಟ್ಟಿ ತಂಡದ ಕೆಲಸಕ್ಕೆ ಭೇಷ್ ಅಂದಿದ್ದರು. ಮಾತ್ರವಲ್ಲದೆ ಚಿತ್ರದ ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತನಾಡಿದ ಅವರರು, ‘ನಾನು ಈಗಾಗ್ಲೇ ಟ್ರೈಲರ್ ನೋಡಿದ್ದೀನಿ. ಟ್ರೈಲರ್ ತುಂಬಾ ಚೆನ್ನಾಗಿದೆ ಅಂದಿದ್ದರು.
ಇದೀಗ ರಕ್ಷಿತ್ ಶೆಟ್ಟಿ ಹೇಳಿದಂತೆ ಅಳಿದು ಉಳಿದವರು ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಇತ್ತೀಚೆಗಷ್ಟೇ ಲೂಸಿಯಾ ಪವನ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಳಿದು ಉಳಿದವರು ಚಿತ್ರದ ಅಫಿಶಿಯಲ್ ಟ್ರೈಲರ್ ನ ಲಾಂಚ್ ಮಾಡಿದ್ರು. ಟ್ರೈಲರ್ ರಿಲೀಸ್ ಆಗ್ತಿದ್ದಂತೆ. ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಟ್ರೈಲರ್ ನೋಡಿದವರೆಲ್ಲ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ. ಜೊತೆಗೆ ಟ್ರೈಲರ್ ನೋಡಿದವರು ಚಿತ್ರ ನೋಡಲೇಬೇಕು ಅನ್ನುತ್ತಿದ್ದಾರೆ.
ಚಿತ್ರಕ್ಕೆ ಅರವಿಂದ್ ಶಾಸ್ತ್ರಿ ಈ ಆಕ್ಷನ್ ಕಟ್ ಹೇಳಿದ್ದು, ಬೆದ್ರ ವೆಂಚರ್ಸ್ ಮತ್ತು ಪಿವಿಆರ್ ಪಿಚ್ಚರ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಅಶು ಬೆದ್ರ ಚೊಚ್ಚಲ ಬಾರಿಗೆ ನಿರ್ಮಾಣದೊಂದಿಗೆ ನಾಯಕ ನಟನಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಂಗೀತಾ ಭಟ್, ಪವನ್ ಕುಮಾರ್, ಅತುಲ್ ಕುಲರ್ಕಣಿ, ಬಿ ಸುರೇಶ್, ಅರವಿಂದ್ ರಾವ್ ಪ್ರಮುಖ ಪಾತ್ರಗಳಲ್ಲಿ ಸಾಥ್ ಕೊಟ್ಟಿದ್ದಾರೆ. ಮಿಧುನ್ ಮುಕುಂದ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಅಳಿದು ಉಳಿದವರು ಕಥೆ ಒಂದು ಜನಪ್ರಿಯ ವಾಹಿನಿಯ, ಜನಪ್ರಿಯ ಕಾರ್ಯಕ್ರಮದ ನೂರನೇ ಸಂಚಿಕೆಯನ್ನ ರೂಪಿಸೋ ಸಂದರ್ಭದಲ್ಲಿ ಎದುರಾಗುವ ಸವಾಲುಗಳು, ಟಿ.ಆರ್.ಪಿಗಾಗೀ ಪಡುವ ಪರಿಪಾಟಲುಗಳನ್ನೇ ಕಥಾಹಂದರವನ್ನಾಗಿಸಿ ಮಾಡಿರೋ ಔಟ್ ಅಡ್ ಔಟ್ ಸಸ್ಪೆನ್ಸ್ ಥ್ರಿಲ್ಲಿಂಗ್ ಎಂಟರ್ಟೈನಿಂಗ್ ಸಬ್ಜೆಕ್ಟ್.
ಸದ್ಯ ಟ್ರೈಲರ್ ನಿಂದ್ಲೇ ಸಾಕಷ್ಟು ಕುತೂಹಲ ಕೆರಳಿಸಿರೋ ಅಳಿದು ಉಳಿದವರು ಚಿತ್ರ ಇದೇ ಡಿಸೆಂಬರ್ 6ನೇ ತಾರೀಖು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.

Discussion about this post