ಬೆಂಗಳೂರು : ಅಪ್ಪನ ಹೆಸರಿನ ಕಾರಣಕ್ಕೆ ಜನ ನನ್ನ ಗುರುತಿಸುವುದು ಬೇಕಾಗಿಲ್ಲ ಎಂದು ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಹೇಳಿದ್ದಾರೆ.
ಕನ್ನಡ ಪತ್ರಿಕಯೊಂದಕ್ಕೆ ಸಂದರ್ಶನ ಕೊಟ್ಟಿರುವ ಅವರು, ಅಪ್ಪನ ಹೆಸರಿನಿಂದ ಜನ ನನ್ನ ಗುರುತಿಸುವುದು ಬೇಕಾಗಿಲ್ಲ. ಅಪ್ಪ ನನಗೆ ಕಷ್ಟ ಪಟ್ಟು ಮೇಲೆ ಬರುವಂತೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ನನ್ನದೇ ಶ್ರಮದ ಮೂಲಕ ನಾನು ಗುರುತಿಸಿಕೊಳ್ಳುವಂತಾಗಬೇಕು ಅಂದಿದ್ದಾರೆ.
ಇನ್ನು ಅಕ್ಷಿತ್ ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಯಾವುದೂ ಕೂಡಾ ಬಿಡುಗಡೆಯಾಗಿಲ್ಲ. ಕೊರೋನಾ ಕಾರಣದಿಂದ ಮೊದಲ ಸಿನಿಮಾ ಸೀತಾಯಣ ವಿಳಂಭವಾಗಿದ್ದು, ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.
ಇನ್ನು ಎರಡನೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಮೂರನೇ ಸಿನಿಮಾ ಓ ಮೈ ಲವ್ ಕೂಡಾ ಚಿತ್ರೀಕರಣದಲ್ಲಿದೆ.
ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅಕ್ಷಿತ್ ನನಗೆ ಪುಸ್ತಕ ಅಂದ್ರೆ ಅಲರ್ಜಿ, ಓದುವುದು ಅಂದ್ರೆ ಸ್ಕ್ರಿಪ್ಟ್ ಮಾತ್ರ ಅಂದಿದ್ದಾರೆ.
Discussion about this post