Wednesday, March 3, 2021

ಶಾಸಕಿ ಸೌಮ್ಯ ಅವರಿಗೊಂದು ನ್ಯಾಯ… ಅಖಂಡ ಅವರಿಗೊಂದು ನ್ಯಾಯ.. ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು…

Must read

ಬೆಂಗಳೂರು : ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.

ಮಾತ್ರವಲ್ಲದೆ ಈ ಪ್ರತಿಭಟನೆಯಲ್ಲಿ ಘಟಾನುಘಟಿ ನಾಯಕು ಪಾಲ್ಗೊಂಡಿದ್ದರು.

ಆದರೆ ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದ ವೇಳೆ ಪ್ರತಿಭಟನೆ ಬಿಡಿ ಅವರ ಪರ ಎತ್ತಲು ಯಾವೊಬ್ಬ ಕಾಂಗ್ರೆಸ್ ನಾಯಕರು ಮುಂದೆ ಬಂದಿರಲಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ಬೆಂಗಳೂರು ಬೆಂಕಿ ಬಿಂದಿದ್ದ ಸಂಪತ್ ರಾಜ್ ಬೆನ್ನಿಗೆ ನಿಂತಿದ್ದರು.

ಈ ವಿಷಯ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಪ್ರಸ್ತಾಪವಾಗಿದೆ.

ಸಭೆಯಲ್ಲಿ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಪರ ನಿನ್ನೆ ದೊಡ್ಡ ಪ್ರತಿಭಟನೆ ನಡೆಯಿತು.

ಕೇವಲ ಎಫ್ ಐ ಆರ್ ದಾಖಲಾಗಿದಕ್ಕೆ ಈ ಮಟ್ಟದ ಪ್ರತಿಭಟನೆ ನಡೆಯಿತು. ಆದರೆ ನನ್ನ ಮನೆಗೆ ಬೆಂಕಿ ಹಾಕಿದರೆ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ. ಹೋಗ್ಲಿ ಸಾಂಕೇತಕವಾಗಿ ಪ್ರತಿಭಟನೆ ಅದೂ ಇಲ್ಲ. ಪಕ್ಷದಲ್ಲಿ ಅವರಿಗೊಂದು ನ್ಯಾಯ, ನನಗೊಂದು ನ್ಯಾಯವೇ ಎಂದು ಅಖಂಡ ಪ್ರಶ್ನಿಸಿದ್ದಾರಂತೆ.

ಆದರೆ ಅಖಂಡ ಅವರ ಪ್ರಶ್ನೆಗೆ ಅದ್ಯಾವ ಕಾಂಗ್ರೆಸ್ ನಾಯಕರ ಬಳಿಯೂ ಉತ್ತರವಿರಲಿಲ್ಲ.

- Advertisement -
- Advertisement -

Latest article