Monday, April 19, 2021

ಜಾರಕಿಹೊಳಿ ಸಿಡಿ ಸ್ಪೋಟದ ಬೆನ್ನಲ್ಲೇ ಕೋರ್ಟ್ ಮೆಟ್ಟಿಲು ಹತ್ತಿದ 6 ಸಚಿವರು…?

Must read

- Advertisement -
- Advertisement -

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ಸಿಡಿ ಸ್ಫೋಟದ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಡಬಾರದ ಕೆಲಸ ಮಾಡಲು ಹೋದ ಕರ್ಮಕ್ಕೆ ಅವರ ತಲೆದಂಡವಾಗಿದೆ.

ಇದೀಗ ಜಾರಕಿಹೊಳಿ ಸಿಡಿ ಸ್ಫೋಟದ ಬೆನ್ನಲ್ಲೇ , 6 ಸಚಿವರು ತಮ್ಮ ವಿರುದ್ಧ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

ಗಮನಾರ್ಹ ಅಂದ್ರೆ ಕೋರ್ಟ್ ಮೆಟ್ಟಿಲು ಹತ್ತಿದ ಎಲ್ಲಾ ಸಚಿವರು ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ ಸಂದರ್ಭದಲ್ಲೇ ಬಿಜೆಪಿ ಸೇರಿ ಸಚಿವರಾದವರು.

ಡಾ.ಕೆ.ಸುಧಾಕರ್, ಭೈರತಿ ಬಸವರಾಜ್, ನಾರಾಯಣಗೌಡ, ಎಸ್.ಟಿ. ಸೋಮಶೇಖರ್, ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಆದರೆ ಅದ್ಯಾವ ವಿಚಾರದಲ್ಲಿ ಇವರಿಗೆ ಢವ ಢವ ಶುರುವಾಗಿದೆ ಅನ್ನುವುದು ಯಕ್ಷ ಪ್ರಶ್ನೆ.

ಇದೀಗ ಕೋರ್ಟ್ ಗೆ ಅರ್ಜಿ ಮಾತ್ರ ಸಲ್ಲಿಸಲಾಗಿದೆ.ಇನ್ನೂ ಆದೇಶ ಹೊರ ಬಂದಿಲ್ಲ. ಕೋರ್ಟ್ ಆದೇಶ ಹೊರ ಬಂದ ಬಳಿಕವೇ ಯಾವ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಲು ನಿರ್ಬಂಧ ವಿಧಿಸಲಾಗಿದೆ ಅನ್ನುವುದು ಗೊತ್ತಾಗಲಿದೆ.

ಜಾರಕಿಹೊಳಿ ಪ್ರಕರಣದ ಬೆನ್ನಲ್ಲೇ ಇವರು ಕೋರ್ಟ್ ಮೆಟ್ಟಿಲೇರಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.

- Advertisement -
- Advertisement -
- Advertisement -

Latest article