ಕಾಬೂಲ್ : ಅಫ್ಘಾನ್ ಅನ್ನು ವಶಪಡಿಸಿಕೊಂಡಿರುವ ತಾಲಿಬಾನಿ ಉಗ್ರರು ಶುಕ್ರವಾರ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಶುಕ್ರವಾರ ಸರ್ಕಾರ ರಚನೆಯಾಗುವುದು ಬಿಡಿ, ಸರ್ಕಾರ ರಚನೆ ಪ್ರಕ್ರಿಯೆಯನ್ನೇ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಶನಿವಾರ ತಾಲಿಬಾನಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಭಾವಿಸಲಾಗಿತ್ತು. ಆದೂ ಕೂಡಾ ಸಾಧ್ಯವಾಗಿಲ್ಲ. ಈ ನಡುವೆ ಸರ್ಕಾರ ರಚನೆಯನ್ನು ಒಂದು ವಾರ ಮುಂದೂಡಲಾಗಿದೆ.
ಈ ನಡುವೆ ಮುಂದಿನ ವಾರ ಸರ್ಕಾರ ರಚನೆಯಾಗಲಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ವಿಶಾಲ ಚಿಂತನೆ ಹಾಗೂ ಅಂತರರಾಷ್ಟ್ರೀಯ ಸಮುದಾಯ ಒಪ್ಪುವಂತಹ ಸರ್ಕಾರ ರಚಿಸಲು ತಾಲಿಬಾನ್ ಶ್ರಮಿಸುತ್ತಿದೆ ಹೀಗಾಗಿ ವಿಳಂಭವಾಗಿದೆ ಅಂದಿದ್ದಾರೆ.
ಆದರೆ ಸರ್ಕಾರ ರಚನೆ ವಿಳಂಭಕ್ಕೆ ತಾಲಿಬಾನಿಗಳ ನಡುವಿನ ಒಡುಕು ಕಾರಣ ಎನ್ನಲಾಗಿದೆ. ಸರ್ಕಾರ ರಚನೆ ಸಂಬಂಧ ತಾಲಿಬಾನ್ಗಳಲ್ಲೇ ಎರಡು ಬಣಗಳ ನಡುವೆ ಅಪಶ್ರುತಿ ಎದ್ದಿದೆ. ಹೀಗಾಗಿ ಹಕ್ಕಾನಿ ನೆಟ್ವರ್ಕ್ ಮತ್ತು ಮುಲ್ಲಾ ಬರದಾರ್ ಬಣಗಳ ನಡುವಿನ ಬಂಡಾಯ ಶಮನವಾಗದ ಹೊರತು ಸರ್ಕಾರ ರಚನೆ ಸಾಧ್ಯವಿಲ್ಲ.
ಹೀಗಾಗಿಯೇ ಇದೀಗ ತಾಲಿಬಾನಿ ಪರ ಇರುವ ಕೆಲ ರಾಷ್ಟ್ರಗಳು ಮಧ್ಯಪ್ರವೇಶಿಸಿದ್ದು, ಸರ್ಕಾರ ರಚನೆ, ವಿಮಾನ ನಿಲ್ದಾಣ ನಿರ್ವಹಣೆ ಹೀಗೆ ಅಗತ್ಯ ನೆರವು ನೀಡಲು ಮುಂದಾಗಿದೆ. ಇದರಲ್ಲಿ ಪಾಕಿಸ್ತಾನ ಕೂಡಾ ಪ್ರಮುಖ ಪಾತ್ರ ವಹಿಸಿದ್ದು , ಪಾಕಿಸ್ತಾನ ಗುಪ್ತಚರ ದಳ (ISI)ದ ಮುಖ್ಯಸ್ಥ ಲೆಫ್ಟೆನೆಂಟ್ ಜನರಲ್ ಫೈಜ್ ಹಮೀದ್ ಕಾಬೂಲ್ಗೆ ಭೇಟಿ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಹಮೀದ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.
Discussion about this post