Saturday, February 27, 2021

ಪಾಪ ಅದೇನೂ ಸಂಕಷ್ಟವಿತ್ತೋ… ಗಂಡನಿಗೆ 1248 ಕೋಟಿ ರೂಪಾಯಿ ಪರಿಹಾರ ಕೊಟ್ಟ ಗಾಯಕಿ

Must read

ಬೆಂಗಳೂರು :  ಸಾಮಾನ್ಯವಾಗಿ ಡಿವೋರ್ಸ್ ಪ್ರಕರಣಗಳಲ್ಲಿ ಗಂಡನೇ ಹೆಂಡತಿಯಾದವಳಿಗೆ ಜೀವನಾಂಶ ನೀಡಬೇಕಾಗುತ್ತದೆ.

ಅಪರೂಪದಲ್ಲಿ ಅಪರೂಪ ಅನ್ನುವಂತೆ ಪತ್ನಿ ಪತಿಗೆ ಜೀವನಾಂಶ ನೀಡುವ ಪ್ರಕರಣಗಳು ಈ ತನಕ ವರದಿಯಾಗಿದೆ. ಆದರೆ ಅದು ಅಷ್ಡೊಂದು ದೊಡ್ಡ ಮೊತ್ತದ ಪರಿಹಾರವಾಗಿರಲಿಲ್ಲ.

ಇದೀಗ ಹಾಲಿವುಡ್ ಗಾಯಕಿ, ಗ್ರ್ಯಾಮಿ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಗಾಯಕಿ ಅಡೆಲೆ ದೊಡ್ಡ ಮೊತ್ತದ ಪರಿಹಾರವೊಂದನ್ನು ಪತಿಗೆ ನೀಡಿ ದಾಂಪತ್ಯ ಜೀವನದಿಂದ ದೂರ ಸರಿದಿದ್ದಾರೆ.

171 ಮಿಲಿಯನ್ ಡಾಲರ್ ಮೊತ್ತದ ಪರಿಹಾರ ಇದಾಗಿದ್ದು, ರೂಪಾಯಿ ಲೆಕ್ಕ ಹಾಕಿದ್ರೆ 1248 ಕೋಟಿಯಷ್ಟಾಗುತ್ತದೆ.

ಗಾಯಕಿ ಅಡಲೆ 2011 ರಿಂದ ಸೈಮನ್ ಜೊತೆ ಡೇಟಿಂಗ್ ನಲ್ಲಿದ್ದರು. ಸೈಮನ್ ಗೆ ಇದು ಎರಡನೇ ಸಂಬಂಧವಾಗಿತ್ತು.  2012ರಲ್ಲಿ ಅಡೆಲೆ ಸೈಮನ್ ಕಡೆಯಿಂದ ಗಂಡು ಮಗುವೊಂದನ್ನು ಪಡೆದಿದ್ದರು. 2016ರಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ ಏನಾಯ್ತೋ ಗೊತ್ತಿಲ್ಲ 2019ರಲ್ಲಿ ಪರಸ್ಪರ ಸಮ್ಮತಿಯಿಂದ ದೂರವಾಗಲು ನಿರ್ಧರಿಸಿದ್ದರು. ಅಧಿಕೃತವಾಗಿ ದೂರವಾಗುತ್ತಿದ್ದೇವೆ ಎಂದು ಘೋಷಿಸಿದ್ದ ದಂಪತಿ 5 ತಿಂಗಳ ಬಳಿಕ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಈ ಸಂಬಂಧ ವಿಚ್ಛೇದನ ಪಡೆಯುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ಇದೀಗ ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದು, ಜಗತ್ತು ಮೆಚ್ಚಿದ ಗಾಯಕಿ ದಾಂಪತ್ಯ ಜೀವನದಿಂದ ಮುಕ್ತಿ ಪಡೆದಿದ್ದಾರೆ.

ಇಬ್ಬರೂ ಪರಸ್ಪರ ವಿಚ್ಛೇದನ ಪಡೆದರೂ ಮಗ ಎಂಜೆಲೊ ಜೊತೆ ಜಂಟಿಯಾಗಿ ಜೀವನ ನಡೆಸಲಿದ್ದಾರೆ. ಅಂದ ಹಾಗೇ ಸೈಮನ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ

- Advertisement -
- Advertisement -

Latest article