ಕೆಲವು ಬುದ್ದಿ ಇಲ್ಲದ ಜೀವಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಏನು ಬರೆಯಬೇಕು, ಬರೆಯಬಾರದು ಅನ್ನುವ ಪರಿಜ್ಞಾನ ಇರುವುದಿಲ್ಲ. ಯಾವ ಕಮೆಂಟ್ ಹಾಕಬೇಕು, ಯಾವ ಕಮೆಂಟ್ ಹಾಕಬಾರದು ಅನ್ನುವ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಅದರಲ್ಲೂ ಮಹಿಳೆಯರ ಬಗ್ಗೆ ಕಮೆಂಟ್ ಮಾಡುವಾಗ ಎಚ್ಚರವಾಗಿರಬೇಕು ಅನ್ನುವ ಮನುಷ್ಯತ್ವವೂ ಇರೋದಿಲ್ಲ.
Buy Mens Fashion Starting from Rs.299
ಹೀಗೆ ಬುದ್ದಿ ಇಲ್ಲದ ಜೀವಿಯೊಬ್ಬ ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚೆಂಗಪ್ಪ ಅವರ ಬೇಬಿ ಬಂಪ್ ಫೋಟೋಗೆ ಕಮೆಂಟ್ ಮಾಡಿ ಗರ್ಭಿಣಿ ಮನಸ್ಸಿಗೆ ನೋವು ಕೊಟ್ಟು ವಿಕೃತಿ ಮೆರೆದಿದ್ದಾನೆ.
Buy Womens Fashion starting from Rs.399
ಇತ್ತೀಚೆಗೆ ಕೊಡಗು ಶೈಲಿಯ ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಶ್ವೇತಾ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋವನ್ನು ನೋಡಿದ ವ್ಯಕ್ತಿಯೊಬ್ಬ ಕೊನೆಗೂ ಸೃಜನ್ ಲೋಕೇಶ್ ತಂದೆಯಾಗುತ್ತೀದ್ದೀರಾ ಅಭಿನಂದನೆಗಳು, ಮಜಾ ಟಾಕೀಸ್ ಗೆ ಹೊಸ ಎಂಟ್ರಿ ಎಂದು ಕಮೆಂಟ್ ಮಾಡಿದ್ದ.
ಕಿಂಗ್ ಆಫ್ ಶೆಟ್ಟಿ ಎಂಬ ಖಾತೆಯಿಂದ ಈ ಕಮೆಂಟ್ ಬಂದಿದ್ದು ಇದಕ್ಕೆ ಶ್ವೇತಾ ಚೆಂಗಪ್ಪ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದು, ನೀವು ಸೃಜನ್ ಲೋಕೇಶ್ ಗೆ ಅಭಿನಂದನೆಯನ್ನು ಯಾಕೆ ಹೇಳುತ್ತೀರಿ. ನಾನು ನನ್ನ ವೈಯಕ್ತಿಕ ಫೋಟೋವನ್ನು ಪೋಸ್ಟ್ ಮಾಡಿದ್ದೇನೆ. ನೀವು ತಮಾಷೆ ಅಂದುಕೊಂಡಿದ್ದೀರಾ. ಮೊದಲು ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆಯನ್ನು ನೀವು ಹೊಂದಬೇಕು ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

Discussion about this post