ಚಂದನವನದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಅವರ ಆರೋಗ್ಯದ ಕಾರಣದಿಂದ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸಂಜನಾ ಪರ ವಾದ ಮಂಡಿಸಿದ ವಕೀಲ ಹಜ್ಮತ್ ಪಾಷಾ, ಸಂಜನಾ ಆನಾರೋಗ್ಯದ ವಿಚಾರವನ್ನು ಎಳೆಎಳೆಯಾಗಿ ನ್ಯಾಯಾಧೀಶರಿಗೆ ವಿವರಿಸಿದ್ದಾರೆ. ಸಂಜನಾ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಇಲ್ಲವಾದರೆ ಹ್ಯಾಮರೇಜ್ ಆಗುವ ಅಪಾಯವಿದೆ ಅಂದಿದ್ದಾರೆ.

ಆರೋಗ್ಯದ ವಿಚಾರವಾಗಿರುವ ಕಾರಣ ಸಂಜನಾ ಪರ ವಕೀಲರ ವಾದವನ್ನು ಒಪ್ಪಿರುವ ನ್ಯಾಯಾಧೀಶರು ಜಾಮೀನು ಮಂಜೂರುಗೊಳಿಸಿದ್ದಾರೆ.
ಈ ನಡುವೆ ಗಂಡ ಹೆಂಡತಿಯ ಖ್ಯಾತಿಯ ನಟಿ ಜಾಮೀನು ದೊರೆತಿರುವುದು ಸಹಜವಾಗಿಯೇ ಪೋಷಕರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಹೈಕೋರ್ಟ್ ಆದೇಶ ಜೈಲಿಗೆ ತಲುಪಿದ ಬೆನ್ನಲ್ಲೇ ಸಂಜನಾ ಜೈಲಿನಿಂದ ಹೊರಗೆ ಬರಲಿದ್ದಾರೆ. ತನಗೆ ಜೈಲು ದೊರೆತಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಜನಾ ಸಿಕ್ಕಾಪಟ್ಟೆ ಖುಷಿಯಾಗಿದ್ದರು ಎಂದು ಜೈಲು ಮೂಲಗಳು ತಿಳಿಸಿದ್ದು, ಸಂಜನಾ ಮತ್ತು ರಾಗಿಣಿ ಪರಸ್ಪರ ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ ರಾಗಿಣಿಯನ್ನು ಸಮಾಧಾನಗೊಳಿಸಿರುವ ಸಂಜನಾ ನಿನಗೂ ಶೀಘ್ರದಲ್ಲೇ ಜಾಮೀನು ದೊರೆಯಲಿದೆ ಅಂದಿದ್ದಾರಂತೆ.