ಬೆಂಗಳೂರು : ಚಂದನವನದ ಬ್ಯುಸಿ ನಟಿ ರಚಿತಾ ರಾಮ್ ಹಣೆಗೆ ನಾಮ ಇಟ್ಟುಕೊಂಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಮುಂಜಾನೆಯ ಒಂದು ಪುಟ್ಟ ಧನಾತ್ಮಕ ಯೋಚನೆ ಇಡೀ ದಿನವನ್ನು ಬದಲಿಸುತ್ತದೆ. ಹೀಗಾಗಿ ಧನಾತ್ಮಕ ಯೋಚನೆಯೊಂದಿಗೆ ದಿನ ಪ್ರಾರಂಭಿಸಿ ಎಂದು ಬರೆದುಕೊಂಡಿದ್ದರು.
ಈ ಫೋಟೋ ನೋಡಿದ ಅಭಿಮಾನಿಗಳು ನಟಿಯ ಆಸ್ತಿಕತೆಯನ್ನು ಮೆಟ್ಟಿ ಕೊಂಡಾಡಿದ್ದರು. ಆದರೆ ಅದ್ಯಾಕೆ ರಚಿತಾ ಹೀಗೆ ನಾಮ ಇಟ್ಟುಕೊಂಡಿದ್ದಾರೆ ಅನ್ನುವುದು ಮಾತ್ರ ಗೊತ್ತಾಗಿರಲಿಲ್ಲ. ಇದೀಗ ರಚಿತಾ ನಾಮದ ರಹಸ್ಯ ಬಯಲಾಗಿದೆ.

ಇದು ಮೇಲುಕೋಟೆಯಲ್ಲಿ ಹಾಕಿಸಿಕೊಂಡಿರುವ ನಾಮವಾಗಿದ್ದು, ಚೆಲುವನಾರಾಯಣ ಸ್ವಾಮಿಯ ದರ್ಶನದ ಬಳಿಕ ನಾಮ ಹಾಕಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಶ್ರೀಚೆಲುನಾರಾಯಣಸ್ವಾಮಿ ರಚಿತಾ ಅವರ ಮನೆ ದೇವರಾಗಿದ್ದು, ಪ್ರತೀ ವರ್ಷ ಸ್ವಾಮಿಯ ದರ್ಶನ ಪಡೆಯುವ ಸಂಪ್ರದಾಯವನ್ನು ರಚಿತಾ ಪಾಲಿಸುತ್ತಿದ್ದಾರೆ. ಅದರಂತೆ ಈ ವರ್ಷವೂ ಮನೆ ದೇವರ ದರ್ಶನ ಪಡೆದಿದ್ದಾರೆ. ಜೊತೆಗೆ ಭಕ್ತಿಯಿಂದ ನಾಮವನ್ನು ಧರಿಸಿದ್ದಾರೆ.
ಹೀಗೆ ದೇವಸ್ಥಾನದಿಂದ ಬರುವಾಗ ತೆಗೆದ ಫೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ರಚಿತಾ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು.

Discussion about this post