ನಟಿ ಕಾರುಣ್ಯರಾಮ್ ದುಬಾರಿ ಕಾರು ಖರೀದಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಕನಸುಗಳ ದೊಡ್ಡ ಪಟ್ಟಿಯಲ್ಲಿ ಪುಟ್ಟ ಕನಸೊಂದು ನನಸಾಗಿದೆ ಅಂದಿದ್ದಾರೆ.
BMW Gran Limousine ಕಾರು ಖರೀದಿಸಿರುವ ಕಾರುಣ್ಯ, ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ದೇವಸ್ಥಾನದಲ್ಲಿ ಕಾರಿಗೆ ಪೂಜೆ ನಡೆಸಿರುವ ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದ್ದಾರೆ.
ಈ ಹಿಂದೆ 2021ರ ಪ್ರಾರಂಭದಲ್ಲಿ ಒಳ್ಳೆ ಕೆಲಸಕ್ಕೆ ಕೈ ಹಾಕಿ, ಭೇಷ್ ಅನ್ನಿಸಿಕೊಂಡಿದ್ದರು.
ಕಾರುಣ್ಯರಾಮ್ 2021ಕ್ಕೆ ಕ್ಯಾನ್ಸರ್ ರೋಗಿಗಳಿಗೆ ನೆರವಾಗಬೇಕೆಂಬ ಗೋಲ್ ಇಟ್ಟುಕೊಂಡಿದ್ದರು. ಅದರಂತೆ ಅವರು ತಮ್ಮ ಕೂದಲನ್ನು ಕ್ಯಾನ್ಯರ್ ರೋಗಿಗಳಿಗೆ ನೀಡಿದ್ದರು.
14 ಇಂಚಿನಷ್ಟು ಕೂದಲನ್ನು ಕಟ್ ಮಾಡಿಸಿ ಬೆಂಗಳೂರಿನ ಹೇರ್ ಡೊನೇಷನ್ ಎಂಬ ಸಂಸ್ಥೆ ಮೂಲಕ ತಮ್ಮ ಕೂದಲನ್ನು ದಾನ ಮಾಡಿದ್ದರು.
ಅಷ್ಟು ಉದ್ದದ ಕೂದಲು ಬೆಳೆಸಲು ಅವರು ಸುಮಾರು ಮೂರು ವರ್ಷಗಳ ಕಾಲ ತೆಗೆದುಕೊಂಡಿದ್ದರು.
Discussion about this post