ಕಂಗನಾ ರಣಾವತ್, ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಬಟ್ಟೆ ವಿಚಾರಕ್ಕೆ ಕಂಗನಾ ಟ್ರೋಲ್ ಆಗಿದ್ದರು. ಗ್ಲಾಮರಸ್ ಅಗಿ ತೊಟ್ಟ ಬಟ್ಟೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.ಅವರ ಫೋಟೋಗಳಿಗೆ ನೆಗೆಟಿವ್ ಕಾಮೆಂಟ್ ಬಂದಿದ್ದನ್ನು ಗಮನಿಸಿದ ಕಂಗನಾ, ಹಳೆಯ ಕಾಲದ ಮಹಿಳೆಯ ಬೋಲ್ಡ್ ಫೋಟೋವೊಂದನ್ನು ಹಂಚಿಕೊಂಡು, ನನಗೆ ಸನಾತನ ಧರ್ಮದ ಬಗ್ಗೆ ಅನಾವಶ್ಯಕ ಸಲಹೆ ನೀಡುವವರಿಗೆ ಈ ಉತ್ತರ ಎಂದು ಬರೆದುಕೊಂಡಿದ್ದರು.
ಈ ನಡುವೆ ಮಾರ್ಗಸೂಚಿಗಳನ್ನು ಫಾಲೋ ಮಾಡಿಲ್ಲ ಅನ್ನೋ ಕಾರಣಕ್ಕೆ ಟ್ವಿಟರ್ ಅವರನ್ನು ಬ್ಯಾನ್ ಮಾಡಿತ್ತು. ಇದಾದ ಬಳಿಕ ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇದೀಗ ಕಿಡಿಕೇಡಿಗಳು ಆ ಖಾತೆಯನ್ನೂ ಹ್ಯಾಕ್ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಇದನ್ನು ಕಂಗನಾ ಅವರೇ ಹೇಳಿದ್ದಾರೆ.

ಚೀನಾದಿಂದ ನನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸಲಾಗಿದೆ. ಈ ಬಗ್ಗೆ ನನಗೆ ಎಚ್ಚರಿಕೆಯ ಸಂದೇಶ ಬಂತು. ಇದಾದ ಸ್ವಲ್ಪ ಸಮಯದ ನಂತರ ಆ ಸಂದೇಶ ಮಾಯವಾಯಿತು. ತಾಲಿಬಾನ್ ಬಗ್ಗೆ ನಾನು ಪೋಸ್ಟ್ ಮಾಡಿದ್ದ ಎಲ್ಲಾ ಸ್ಟೋರಿಗಳು ಇನ್‌ಸ್ಟಾಗ್ರಾಮ್ ನಲ್ಲಿ ನಾಪತ್ತೆಯಾಗಿದೆ.
ಇದನ್ನೂ ಓದಿ : ಕಂಗನಾ ಹಾಟ್ ಅವತಾರಕ್ಕೆ ಪಡ್ಡೆ ಹುಡುಗರ ಕಥೆ ದೇವರಿಗೆ ಪ್ರೀತಿ
ನಾನು ಏನಾದರೂ ಬರೆಯಲು ಪ್ರಯತ್ನಿಸಿದರೆ, ಅಕೌಂಟ್ ಲಾಗ್ಔಟ್ ಆಗುತ್ತಿತ್ತು. ಈ ಬಗ್ಗೆ ಇನ್ಸ್ಟಾಗ್ರಾಮ್ ಗೆ ದೂರು ಕೊಟ್ಟ ಬಳಿಕ ಖಾತೆಗೆ ಲಾಗಿನ್ ಮಾಡಲು ಸಾಧ್ಯವಾಯ್ತು. ಇದು ಅಂತಾರಾಷ್ಟ್ರೀಯ ಪಿತೂರಿ ಅನ್ನಿಸುತ್ತಿದೆ ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ.
Discussion about this post