ಕೊರೋನಾ ಆತಂಕದ ನಡುವೆ ನಾಡು ಗೌರಿ ಹಬ್ಬದ ಸಂಭ್ರಮದಲ್ಲಿದೆ, ಗಣೇಶನ ಹಬ್ಬದ ಸಿದ್ದತೆಯಲ್ಲಿದೆ. ಈ ನಡುವೆ ಸೆಲೆಬ್ರೆಟಿಗಳು ಕೂಡಾ ತಮ್ಮದೇ ರೀತಿಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ರಂಗು ತುಂಬುತ್ತಿದ್ದಾರೆ.
ಈಗಂತು ಸಾಮಾಜಿಕ ಜಾಲತಾಣಗಳ ಜಮಾನ, ಹೀಗಾಗಿ ಅಭಿಮಾನಿಗಳನ್ನು ರಂಜಿಸುವ ಸಲುವಾಗಿ ಡಿಫರೆಂಟ್ ಅನ್ನಿಸುವ ರೀತಿಯ ವಿಡಿಯೋಗಳನ್ನು ಮಾಡುವುದರಲ್ಲಿ ಸೆಲೆಬ್ರೆಟಿಗಳು ಬ್ಯುಸಿಯಾಗಿದ್ದಾರೆ. ಈ ಪೈಕಿ ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಬ್ಬದ ಸಂಭ್ರಮಕ್ಕೆ ಗೌರಿಯಾಗಿರುವ ದೀಪಿಕಾ, ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಶಿವಾರ್ಚನೆಯನ್ನು ಮತ್ತೆ ಮತ್ತೆ ನೋಡಬೇಕು ಅನ್ನುವಂತೆ ಕಾಣಿಸಿಕೊಂಡಿದ್ದಾರೆ.
Discussion about this post