ಆರ್ ಜೆ ರಶ್ಮಿ ಇದೀಗ ರೇಡಿಯೋಗಿಂತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದರೆ. ತಮ್ಮದೇ ಯೂಟ್ಯೂಬ್ ವಾಹಿನಿ ತೆರೆದಿರುವ ಅವರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ.
ಹಾಗಂತ ವಿವಾದಗಳಿಂದ ಅವರು ದೂರವಿಲ್ಲ. ಇತ್ತೀಚೆಗೆ ಸೆಲೆಬ್ರೆಟಿಯೊಬ್ಬರನ್ನು ಸಂದರ್ಶನ ಮಾಡುವ ವೇಳೆ ಎಡವಟ್ಟು ಮಾಡಿಕೊಂಡು ವಾಣಿಜ್ಯ ಮಂಡಳಿ ಮುಂದೆ ಕೈ ಕಟ್ಟಿ ತಲೆಬಗ್ಗಿಸುವ ಪರಿಸ್ಥಿತಿಯೂ ಬಂದಿತ್ತು.
ಆದರೆ ಅವೆಲ್ಲವನ್ನೂ ನಿಭಾಯಿಸುವ ತಾಕತ್ತಿನ ರಶ್ಮಿ ಎಂದಿನಂತೆ ತಮ್ಮ ಸಂದರ್ಶನವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದೀಗ Action Reaction ಅನ್ನುವ ಹೊಸ ಕಾರ್ಯಕ್ರಮವೊಂದನ್ನು ಶುರುವಿಟ್ಟುಕೊಂಡಿದ್ದಾರೆ. ಮೊದಲೇ ರಶ್ಮಿ ನಾಲಗೆಗೆ ಬ್ರೇಕ್ ಹಾಕಿದವರಲ್ಲ. ಹೀಗಾಗಿ Action Reaction ಕಾರ್ಯಕ್ರಮದ ಮೊದಲ ಎಪಿಸೋಡ್ ನಲ್ಲಿ ಅವರು ಆಯ್ದುಕೊಂಡಿದ್ದು ಕಾಂಡೋಮ್.
ಕಾಂಡೋಮ್ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ಕೊಟ್ಟಿರುವ ರಶ್ಮಿ ಒಂದಿಷ್ಟು ಮಸಾಲೆಗಳನ್ನು ಸೇರಿಸಿದ್ದಾರೆ. ಆದರೆ ಕಾಂಡೋಮ್ ಕುರಿತಂತೆ ಅವರು ಶುರುವಿಟ್ಟುಕೊಂಡಿರುವ ಜಾಗೃತಿ ಕಾರ್ಯಕ್ರಮವನ್ನು ಮೆಚ್ಚಿಕೊಳ್ಳಲೇ ಬೇಕು. ಕಾಂಡೋಮ್ ಖರೀದಿ ಅಂದರೆ ಅದೇನೋ ದೊಡ್ಡ ಅಪರಾಧ ಅನ್ನುವಂತೆ ನಮ್ಮ ಸಮಾಜ ನೋಡುತ್ತಿದೆ. ಆದರೆ ಕಾಂಡೋಮ್ ನಿಂದ ಆಗಬಹುದಾದ ಅನುಕೂಲದ ಬಗ್ಗೆ ನಮ್ಮ ಸಮಾಜಕ್ಕೆ ಅರಿವೆಯೇ ಇಲ್ಲ. ಈ ಎಲ್ಲದರ ಸುತ್ತ ಸುತ್ತಿರುವ ಕಾರ್ಯಕ್ರಮದಲ್ಲಿ ಸಾಕಷ್ಟು ಮಾಹಿತಿಗಳಿದೆ. ಮೈ ಚಳಿ ಬಿಟ್ಟು, ಒಳ್ಳೆಯ ಮನಸ್ಸಿನಿಂದ ಕೂತು ನೋಡಿದರೆ ಸಾಕಷ್ಟು ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.
ಅದರಲ್ಲೂ ಮೆಡಿಕಲ್ ಸ್ಟೋರ್ ಮಾಲೀಕನನ್ನು ಸಂದರ್ಶನ ಮಾಡಿರುವ ರಶ್ಮಿ, ಇತ್ತೀಚಿನ ದಿನಗಳಲ್ಲಿ ಗಂಡಸರು ಬಳಸುವ ಕಾಂಡೋಮ್ ಗಳನ್ನು ಮಹಿಳೆಯೇ ಹೆಚ್ಚು ಖರೀದಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಕಾಂಡೋಮ್ ವ್ಯಾಪಾರ ಜೋರಾಗಿರುತ್ತದೆ ಅನ್ನುವ ಮಾಹಿತಿಯನ್ನೂ ಹೊರ ಹಾಕಿದ್ದಾರೆ.
Discussion about this post