ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿದೆ ಅಂತಾ ಕೇಳಿದ್ರೆ 30 ಜಿಲ್ಲೆಗಳು ಅನ್ನುವ ಉತ್ತರ ಥಟ್ ಬರುತ್ತದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಪ್ರಕಾರ ಕರ್ನಾಟಕದಲ್ಲಿ 32 ಜಿಲ್ಲೆಗಳಿದೆ. ಇನ್ನೇರೆಡು ಹೊಸ ಜಿಲ್ಲೆಗಳು ಅದು ಎಲ್ಲಿಂದ ಬಂತೋ ಗೊತ್ತಿಲ್ಲ.
ಗುರುವಾರ ಯಾದಗಿರಿ ನಗರದ ಸರ್ಕಿಟ್ ಹೌಸ್ನಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಿದ ಮೇಲೆ ಇಡೀ ರಾಜ್ಯದ ಪ್ರವಾಸ ಮಾಡುತ್ತಿದ್ದೇನೆ. ಕಾರ್ಯಕರ್ತರ ಭೇಟಿ, ಸಂಘಟನಾ ಪರ್ವ ನಡೆಯುತ್ತಿದೆ. ಮತಗಟ್ಟೆ ಸಮಿತಿ ರಚನೆ ಮಾಡಿ ಸದಸ್ಯತ್ವ ಅಭಿಯಾನಕ್ಕೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಬಂದಿದ್ದೇನೆ ಎಂದರು.
ಅಲ್ಲದೇ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನ ಆಚರಣೆ ನಿಮಿತ್ತವಾಗಿ ರಾಷ್ಟ್ರಾದ್ಯಂತ ಪಾದಯಾತ್ರೆ ಕಾರ್ಯ ನಡೆಯುತ್ತಿದೆ. ಈಗಾಗಲೇ ನಾವು 31 ಜಿಲ್ಲೆಗಳನ್ನು ಪ್ರವಾಸ ಮಾಡಿ, ಈಗ 32ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇ ಅಂದರು.
ಪಾಪ ನಳಿನ್ ಕುಮಾರ್ ಕಟೀಲು 31 ಜಿಲ್ಲೆಯನ್ನು ಸುತ್ತಿ 32 ಜಿಲ್ಲೆಗೆ ಬಂದಿದ್ದೇನೆ ಅಂದಾಗ ಲೋಗೋ ಹಿಡಿದಿದ್ದ ಟಿವಿ ವರದಿಗಾರರು ಗಾಬರಿಯಾಗಿ ಹೋಗಿದ್ದರು.
ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷ ಸ್ಥಾನ ಹೊತ್ತವರು ಜವಾಬ್ದಾರಿಯುತವಾಗಿರಬೇಕು. ಈಗ ಗೊತ್ತಾಯ್ತು ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ 10 ವರ್ಷವಾದರೂ ಯಾಕೆ ಮುಗಿದಿಲ್ಲ ಎಂದು.
Discussion about this post