ರಾಜ್ಯದ ಪೊಲೀಸ್ ಠಾಣೆಗಳನ್ನು ಜನಸ್ನೇಹಿಯಾಗಿಸಬೇಕು, ನ್ಯಾಯಕ್ಕಾಗಿ ಬರುವವರಿಗೆ ದೇವಸ್ಥಾನವಾಗಬೇಕು ಅನ್ನುವುದು ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳ ಆಶಯ. ಆದರೆ ಠಾಣೆಗಳಲ್ಲಿ ಕೂತಿರುವ ಅಧಿಕಾರಿಗಳು ಸಿಬ್ಬಂದಿ ಇದಕ್ಕೆ ವ್ಯತಿರಿಕ್ತವಾಗಿ ಕಾಸು ಅಂದ್ರೆ ಸಾಕು ಬಾಯಿ ಬಿಡುತ್ತಾರೆ. ಇದಕ್ಕೆ ಸಾಕ್ಷಿ ಈ ಹಿಂದೆ ನಡೆದ ಲೋಕಾಯುಕ್ತ ಮತ್ತು ಎಸಿಬಿ ದಾಳಿ. ಅದ್ಯಾವ ಇನ್ಸ್ ಪೆಕ್ಟರ್ ಎದೆಮುಟ್ಟಿ ನಾನು ಲಂಚ ಸ್ವೀಕರಿಸಿಲ್ಲಸ ಕೊಟ್ಟಿಲ್ಲ ಎಂದು ಮುಟ್ಟಿ ಹೇಳುವ ನೈತಿಕ ತಾಕತ್ತು ಹೊಂದಿದ್ದಾರೆ.
ಈ ಕಾರಣಕ್ಕಾಗಿ ಪೊಲೀಸರ ಬಗ್ಗೆ ಜನ ಸಾಮಾನ್ಯರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಸೇರ್ಪಡೆ, ಸಮಾಜ ಸೇವಕ, ಭ್ರಷ್ಟಚಾರ ರಹಿತ ಎಂದು ಹೆಸರು ಗಳಿಸಿದ್ದ ಅಧಿಕಾರಿ ಲಂಚಾವತರ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ರಾಘವೇಂದ್ರ ಜನಸ್ನೇಹಿ ಅನ್ನುವ ಹೆಸರು ಗಳಿಸಿದ್ದರು. ಇನ್ನು ತಮ್ಮದೇ ಟ್ರಸ್ಟ್ ಒಂದನ್ನು ರಚಿಸಿ ಸಮಾಜಸೇವೆಯನ್ನೂ ಮಾಡುತ್ತಿದ್ದರು. ಅವರ ವೇಗ ನೋಡಿದರೆ ರಾಜಕೀಯಗೆ ಎಂಟ್ರಿ ಪಡೆಯೋದು ಗ್ಯಾರಂಟಿ ಅನ್ನುವಂತಿತ್ತು. ಆದರೆ ಇದೀಗ ಅವರು ರಾಜಕೀಯ ಎಂಟ್ರಿ ಖಚಿತವಾಗಿದೆ. ಅಲ್ಲಿರಲು ನಾನು ಲಾಯಕ್ ಎಂದು ಅವರು ಸಾಬೀತು ಮಾಡಿದ್ದು, ಜಮೀನು ವಿವಾದದ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲು 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಫಲಕ ಕಿತ್ತು ಹಾಕಿರುವ ಸಂಬಂಧ ಚಿಕ್ಕಜಾಲದ ನಿವಾಸಿಯೊಬ್ಬರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ರಾಘವೇಂದ್ರ, ತನಿಖೆ ನಡೆಸಲು 10 ಲಕ್ಷ ರೂಪಾಯಿ ಭಿಕ್ಷೆ ಕೇಳಿದ್ದರಂತೆ. ಈ ಬಗ್ಗೆ ಜಮೀನು ಮಾಲೀಕರು ಎಸಿಬಿ ಮೆಟ್ಟಿಲು ಹತ್ತಿದ್ದರು.
ರಾಘವೇಂದ್ರ ಈಗಾಗಲೇ 8 ಲಕ್ಷ ರೂಪಾಯಿ ಬೇಡಿ ಪಡೆದಿದ್ದು ಶನಿವಾರ 2 ಲಕ್ಷ ರೂ ಸ್ವೀಕರಿಸುವಾಗ ದಾಳಿ ನಡೆಸಿ, ಲಂಚದ ಹಣದೊಂದಿಗೆ ರಾಘವೇಂದ್ರ ಅವರನ್ನು ಬಂಧಿಸಲಾಗಿದೆ. ರಾಘವೇಂದ್ರ ಅವರ ಲಂಚ ಪ್ರಕರಣ ನೋಡಿದ ಮೇಲೆ ಅದ್ಯಾವ ಸಮಾಜ ಮುಖಿ ಪೊಲೀಸರನ್ನು ನಂಬುವುದೇ ಕಷ್ಟವಾಗಿದೆ.
Discussion about this post