ಮಹಾಭಾರತದ ದುಷ್ಟನೊಬ್ಬನ ಪತ್ನಿಯಾಗಿ ಬಾಳಿ ಬದುಕಿದವಳು ಭಾನುಮತಿ. ದುರ್ಯೋಧನನ ಬಗ್ಗೆ ಶ್ರೀಕೃಷ್ಣ ಸೇರಿದಂತೆ ಪಾಂಡವರಲ್ಲಿ ಇನ್ನಿಲ್ಲದ ಅಸಹನೆಯಿತು. ಕೌರವವರ ಕೂಟದಲ್ಲಿದ್ದ ವಿದುರ, ಭೀಷ್ಮ ಸೇರಿದಂತೆ ಹಲವಾರು ಮಂದಿಯೂ ದುರ್ಯೋಧನನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಹೊಂದಿರಲೂ ಸಾಧ್ಯವೂ ಇಲ್ಲ ಬಿಡಿ. ಆದರೆ ನಿಷ್ಠೆ ಅನ್ನುವುದೊಂದು ಎಲ್ಲರನ್ನೂ ಕಟ್ಟಿ ಹಾಕಿತ್ತು.
ಈ ಎಲ್ಲದರ ನಡುವೆ ದುರ್ಯೋಧನನ ಕೆಟ್ಟ ಕೆಲಸಗಳ ಬಗ್ಗೆ ಗೊತ್ತಿದ್ದರೂ ಎಲ್ಲವನ್ನೂ ಸಹಿಸಿಕೊಂಡು ನುಂಗಿ ಕೂತವಳು ಭಾನುಮತಿ. ಗಂಡನನ್ನು ಸರಿ ದಾರಿಗೆ ತರೋದು ಬಿಡಿ, ತಿದ್ದುವುದು ಸಾಧ್ಯವಿಲ್ಲ ಅನ್ನುವುದು ಆಗ್ಲೇ ಗೊತ್ತಾಗಿತ್ತು. ಮಗ ದಾರಿ ತಪ್ಪಿದ್ದಾನೆ ಎಂದು ಗೊತ್ತಿದ್ದರೂ ತಂದೆ ತಿದ್ದಿ ತೀಡುವ ಪ್ರಯತ್ನ ಮಾಡಲಿಲ್ಲ. ತಾಯಿಗೂ ಗೊತ್ತಿತ್ತು ಮಗ ಲೋಕ ಕಂಟಕನಾಗುತ್ತಾನೆ ಎಂದು. ಹಾಗಿದ್ದರೂ ಆಕೆ ಮಗನನ್ನು ತಿದ್ದುವ ಕೆಲಸಕ್ಕೆ ಹೈ ಹಾಕಲಿಲ್ಲ. ಮಗನನ್ನು ತಿದ್ದಬೇಕು ಅನ್ನುವಷ್ಟು ಹೊತ್ತಿಗೆ ಸಮಯ ಮಿಂಚಿ ಹೋಗಿತ್ತು. ಹಾಗಿದ್ದ ಮೇಲೆ ಪತ್ನಿಯಾಗಿ ನಾನೇನು ಮಾಡಲು ಸಾಧ್ಯ ಎಂದು ಕೈ ಚೆಲ್ಲಿ ಕೂತಿದ್ದಳು ಭಾನುಮತಿ.
Discussion about this post