ಬಾಗಲಕೋಟೆ : ಹಾವು ಹಿಡಿಯೋ ನಾಗರ ಹಾವು ಕಚ್ಚಿದ ಪರಿಣಾಮ ಬಾಗಲಕೋಟೆಯ ಸ್ನೇಕ್ ಕ್ಯಾಚರ್ ಡೇನಿಯಲ್ ನ್ಯೂಟನ್(43) ಮೃತಪಟ್ಟಿದ್ದಾರೆ.
ಸೀಗಿಕೇರಿ ಗ್ರಾಮದ ಮನೆಯೊಂದರಲ್ಲಿ ಹಾವು ಹಿಡಿಯುವ ವೇಳೆ ಈ ಘಟನೆ ನಡೆದಿತ್ತು. ಒಂದು ತಿಂಗಳ ಹಿಂದಷ್ಟೇ ಡೇನಿಯಲ್ ವಿವಾಹವಾಗಿದ್ದರು.
ಇದುವರೆಗೂ ಸ್ನೇಕ್ ಡೇನಿಯಲ್ ಒಟ್ಟು 3279 ಹಾವನ್ನು ರಕ್ಷಣೆ ಮಾಡಿದ್ದು ಅದರಲ್ಲಿ 1036 ನಾಗರಹಾವುಗಳು ಸೇರಿವೆ. ಒಟ್ಟು 75 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದ ಡೇನಿಯಲ್ ಜೂನ್ ತಿಂಗಳಲ್ಲಿ ನಾಗರ ಹಾವಿನ ಮರಿ ಕಚ್ಚಿದ ಪರಿಣಾಮ ಜೀವಪಾಯದಲ್ಲಿದ್ದರು. ಸಾವು ಬದುಕಿನ ಮಧ್ಯೆ ಹೋರಾಡಿದ್ದ ಅವರು ಬದುಕುಳಿದಿದ್ದರು.
ಇದಾದ ನಂತರ ಮತ್ತೆ ಹಾವು ಹಿಡಿಯುವ ಕಾರ್ಯ ಮುಂದುವರೆಸಿದ್ದ ಡೇನಿಯಲ್ ಬದುಕಿನಲ್ಲಿ ವಿಧಿಯಾಟವೇ ಬೇರೆಯಾಗಿತ್ತು.