ನವದೆಹಲಿ : ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕಿನ ಅಬ್ಬರದಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಕಾಣಿಸಿಕೊಂಡ ನಿಗೂಢ ಜ್ವರ ಕಾಣಿಸಿಕೊಂಡಿದ್ದು ಒಂದೇ ವಾರದಲ್ಲಿ 5 ಮಕ್ಕಳ ಬಲಿಯಾಗಿದ್ದಾರೆ. ಕೊರೋನಾ ಸೋಂಕಿನ 3ನೇ ಅಲೆಯ ಭೀತಿಯ ನಡುವೆ ಈ ಜ್ವರ ಕಾಣಿಸಿಕೊಂಡಿರುವುದು ಭಯ ಹುಟ್ಟಿಸಿದೆ. ಕೊರೋನಾದ ಹೊಸ ರೂಪಾಂತರಿಯೇನಾದರೂ ಶುರುವಾಗಿದೆಯೇ ಅನ್ನುವ ಭೀತಿ ಶುರುವಾಗಿದೆ.
ಉತ್ತರ ಪ್ರದೇಶದ ಮಥುರಾ, ಆಗ್ರಾ ಮತ್ತು ರಾಜಸ್ಥಾನದ ಭರತ್ ಪುರದಲ್ಲಿ 80ಕ್ಕೂ ಹೆಚ್ಚು ಜನ ನಿಗೂಢ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಜ್ವರದ ಹಿನ್ನಲೆ ಮತ್ತು ಕಾರಣಗಳು ಗೊತ್ತಾಗಿಲ್ಲ. ವಿಪರೀತ ಜ್ವರ ಮಾತ್ರ ಇದರ ಲಕ್ಷಣವಾಗಿದೆ. ಇನ್ನು ಮೃತ ಮಕ್ಕಳೆಲ್ಲಾ 1 ರಿಂದ 9 ವರ್ಷದವರಾಗಿದ್ದು, ಎಲ್ಲರೂ ಕೂಡಾ ಒಂದೇ ಗ್ರಾಮದವರಾಗಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾಗಿರುವವರ ಮಾದರಿಯನ್ನು ಡೆಂಘೀ, ಮಲೇರಿಯಾ, ಕೊರೋನಾ ಟೆಸ್ಟ್ ಗೆ ಕಳುಹಿಸಲಾಗಿದೆ.
Six people, including five children, died of a “mysterious” fever in Uttar Pradesh’s Mathura within one week, according to Health Department. Around 80 people have reportedly been admitted to hospitals in Mathura, Agra and Rajasthan’s Bharatpur due to the fever. Mathura CMO said samples for diagnosis of malaria, dengue and COVID-19 have been collected from the patients and their relatives.
Discussion about this post