Saturday, May 15, 2021
spot_img

ಮನಮೋಹನ್ ಸಿಂಗ್ ಸಲಹೆಗೆ ತಲೆ ಬಾಗಿದ ಮೋದಿ – ಮೇ 1 ರಿಂದ ಸರ್ವರಿಗೂ ಕೊರೋನಾ ಲಸಿಕೆ

Must read

- Advertisement -
- Advertisement -

ನವದೆಹಲಿ : ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಮುಂದುವರಿಸಿರುವ ನಡುವೆ ಕೊರೋನಾ ಸೋಂಕಿನಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ.

ಕೊರೋನಾ ಲಸಿಕೆ ವಿತರಣೆಯ ನಾಲ್ಕನೇ ಹಂತವನ್ನು ಘೋಷಿಸಿರುವ ಪ್ರಧಾನಿ ಮೇ 1 ರಿಂದ ಸರ್ವರಿಗೂ ಲಸಿಕೆ ನೀಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಹಿಂದೆ ಜನವರಿ 16ರಂದು ಕೊರೋನಾ ವಾರಿಯರ್ಸ್ ಗಳಿಗೆ ಲಸಿಕಾ ನೀಡುವ ಕಾರ್ಯಕ್ರಮವನ್ನು ಪ್ರಕಟಿಸಲಾಗಿತ್ತು.  ಇದಾದ ಬಳಿಕ 60 ವರ್ಷ ಮೇಲ್ಪಟ್ಟವರಿಗೆ ಲಸಿಕಾ ನೀಡುವ ಯೋಜನೆಯನ್ನು ಪ್ರಕಟಿಸಲಾಗಿತ್ತು. ಈ ಘೋಷಣೆಯ ಕೆಲವೇ ದಿನಗಳಲ್ಲಿ ಎಪ್ರಿಲ್ 1 ರಂದು 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು ಎಂದು ಸೂಚಿಸಲಾಗಿತ್ತು

ಇದೀಗ ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ವರಿಗೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಘೋಷಿಸಲಾಗಿದೆ.

ನಿನ್ನೆಯಷ್ಟೇ ಪ್ರಧಾನಿಗಳಿಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೇಶದ ಎಲ್ಲಾ ನಾಗರಿಕರು ಲಸಿಕೆ ನೀಡುವಂತೆ ಮನವಿ ಮಾಡಿದ್ದರು. ಈ ಮೂಲಕ ಕೊರೋನಾ ಅಲೆಯ ಮೂರನೇ ಅಲೆಯನ್ನು ತಡೆಯಬಹುದು ಎಂದು ಸಲಹೆ ಕೊಟ್ಟಿದ್ದರು.

- Advertisement -
- Advertisement -spot_img
- Advertisement -spot_img

Latest article