ಬೆಂಗಳೂರು : ರಾಜ್ಯದಲ್ಲಿ ಮೂರನೇ ಸೋಂಕಿನ ಅಲೆ ಪ್ರಾರಂಭವಾಗಿದೆಯೇ ಅನ್ನುವ ಅನುಮಾನ ಶುರುವಾಗಿದೆ. ಈಗಾಗಲೇ ಎರಡನೇ ಅಲೆಯ ಅಂತ್ಯವಾಗುತ್ತಿದೆ ಅನ್ನುವಾಗ ನಿತ್ಯ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಹೀಗಾಗಿ ರಾಜ್ಯದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆಯೇ ಅನ್ನುವ ಅನುಮಾನ ಶುರುವಾಗಿದೆ.
ಈ ನಡುವೆ ರಾಜ್ಯದಲ್ಲಿ ಕೊರೋನಾ ರೂಪಾಂತರ ಪ್ರಭೇದ ಡೆಲ್ಟಾ ಪ್ಲಸ್ ನ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿದೆ.
2 ತಿಂಗಳ ಹಿಂದೆ ಬೆಂಗಳೂರಿನ ನಂದಿನಿ ಬಡಾವಣೆಯ 60 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಆಗ ಅವರ ಸ್ಯಾಂಪಲ್ ನ ಜಿನೋಮ್ ಅನ್ನು ಪ್ರಯೋಗಲಾಯಕ್ಕೆ ಕಳುಹಿಸಿಕೊಡಲಾಗಿತ್ತು. ಅದರ ವರದಿ ಸೋಮವಾರ ಬಂದಿದ್ದು, ಡೆಲ್ಟಾ ಪ್ಲಸ್ ಸೋಂಕಿತರಾಗಿದ್ದರು ಅನ್ನುವುದು ಗೊತ್ತಾಗಿದೆ. ವರದಿ ಬರುವ ಹೊತ್ತಿಗೆ ಸೋಂಕಿಗೆ ತುತ್ತಾಗಿದ್ದ ಮಹಿಳೆ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿದ್ದರು. ಜೊತೆಗೆ ಇವರ ಪ್ರಾಥಮಿಕ ಸಂಪರ್ಕದಿಂದ ಮೂವರು ಕೊರೋನಾ ಸೋಂಕಿಗೆ ತುತ್ತಾಗಿದ್ದು ಅವರಿಗೆ ಸೋಂಕಿನ ಗುಣಲಕ್ಷಗಳು ಇರಲಿಲ್ಲ.
ಈ ಹಿಂದೆ ಬೆಂಗಳೂರಿನಲ್ಲಿ 1 ಹಾಗೂ ಮೈಸೂರಿನಲ್ಲಿ 1 ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಒಬ್ಬರು ಮಾತ್ರ ಆಸ್ಪತ್ರೆ ದಾಖಲಾಗಿದ್ದರು. ಜೊತೆಗೆ ಗುಣಮುಖರಾಗಿ ಮನೆಗೂ ಮರಳಿದ್ದರು.
Discussion about this post