ಬೆಂಗಳೂರು : ನಗರದ ನರ್ಸಿಂಗ್ ಕಾಲೇಜೊಂದರ 40 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಂಡು ಬಂದ ಬೆನ್ನಲ್ಲೇ ಆಪಾರ್ಟ್ ಮೆಂಟ್ ಒಂದರ 28 ನಿವಾಸಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಆಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದ್ದು.
ಶನಿವಾರ ಮತ್ತು ಭಾನುವಾರ ಅಪಾರ್ಟ್ ವಾಸಿಗಳನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ 28 ಸೋಂಕಿತರು ಪತ್ತೆಯಾಗಿದ್ದಾರೆ.
ಇನ್ನೂ ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಬೇಕಾಗಿದ್ದು, ಸೋಮವಾರ ಒಂದಿಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಾಳೆ ವರದಿ ಬರೋ ಸಾಧ್ಯತೆಗಳಿದೆ.
ಅಪಾರ್ಟ್ ಮೆಂಟ್ ನಲ್ಲಿ ನಡೆದ ಪಾರ್ಟಿಯೊಂದು ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಲು ಕಾರಣ ಅನ್ನುವ ಶಂಕೆ ವ್ಯಕ್ತವಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಕೂಡಾ ಇದನ್ನು ದೃಢಪಡಿಸಿದ್ದಾರೆ.
ಸೋಂಕಿತರು ಇದೀಗ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದು, ಕೊರೋನಾ ಮತ್ತಷ್ಟು ಹರಡುವುದನ್ನು ತಪ್ಪಿಸುವ ಸಲುವಾಗಿ reverse isolation technique ಪಾಲಿಸಲಾಗುತ್ತಿದೆ. ಈ ಮೂಲಕ ನೆಗೆಟಿವ್ ಹೊಂದಿದ ಮಂದಿ ಸೋಂಕಿಗೆ ಒಳಗಾಗದಂತೆ ತಡೆಯಲಾಗುತ್ತಿದೆ.
ಇದರೊಂದಿಗೆ ಇಡೀ ಅಪಾರ್ಟ್ ಮೆಂಟ್ ಅನ್ನು ಸ್ಯಾನಿಟೈಸ್ ಮಾಡಲಿದೆ. ಇನ್ನು ಆಪಾರ್ಟ್ ಮೆಂಟ್ ನಲ್ಲಿ ಆರೋಗ್ಯ ಕ್ಯಾಂಪ್ ಗಳನ್ನು ಪಾಲಿಕೆ ಆಯೋಜಿಸಿದ್ದು, ಆಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ.
ಇನ್ನು ಆಪಾರ್ಟ್ ಮೆಂಟ್ ನ ಮನೆ ಮನೆ ಸರ್ವೇ ಕಾರ್ಯ ನಡೆಯುತ್ತಿದ್ದು, ನಿವಾಸಿಗಳು contact ಟ್ರೇಸ್ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ನಿಟ್ಟುಸಿರುವ ಬಿಡುವ ಸಂದರ್ಭದಲ್ಲಿ ಒಂದೇ ಕಡೆ ದೊಡ್ಡ ಸಂಖ್ಯೆಯ ಸೋಂಕಿತರು ಪತ್ತೆಯಾಗುತ್ತಿರುವುದು ಆತಂಕವೇ ಸರಿ.