ಸಂಖ್ಯಾ ಶಾಸ್ತ್ರ: ಹುಟ್ಟಿದ ದಿನಾಂಕ ಹೇಳಿ ಅದೃಷ್ಟದ ವರ್ಷ ತಿಳಿಯಿರಿ!

ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವು ಆತ ಹುಟ್ಟಿದ ಕ್ಷಣವೇ ನಿರ್ಧರಿಸುತ್ತದೆ. ಎನ್ನುವುದನ್ನು ಜ್ಯೋತಿಷ್ಯಾಸ್ತ್ರ ಹೇಳುತ್ತದೆ. ಹಾಗೆಯೇ ಹುಟ್ಟಿದ ದಿನಾಂಕವು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಅದೃಷ್ಟದ ವರ್ಷವನ್ನು ಹೇಳುತ್ತದೆ ಎನ್ನುವುದನ್ನು ಸಹ ವ್ಯಾಖ್ಯಾನಿಸುತ್ತದೆ. ಇವುಗಳ ಬಗ್ಗೆ ನಮಗೆ ನಂಬಿಕೆ ಹಾಗೂ ವಿಶ್ವಾಸ ಇರಬೇಕು ಅಷ್ಟೆ.

ವ್ಯಕ್ತಿಗೆ ಸುಖವಿದ್ದಾಗ ಅದೃಷ್ಟ ಹಾಗೂ ದೈವಶಕ್ತಿಯ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಅದೇ ಸಮಸ್ಯೆಗಳು ಒಂದಾದ ಮೇಲೊಂದರಂತೆ ಬರುತ್ತಿರುವಾಗ ಬೇಡವೆಂದರೂ ಮನಸ್ಸು ಭವಿಷ್ಯದ ಬಗ್ಗೆ ಯೋಚಿಸುತ್ತದೆ. ಅದೃಷ್ಟದ ದಿನ ಎಂದು ಬರುವುದು ಎಂದು ಕಾಯುತ್ತಿರುತ್ತದೆ. ನಿಜ, ಇಂತಹ ಮನಸ್ಸಿಗೆ ಸಾಂತ್ವನ ನೀಡುವ ವಿಚಾರದ ಬಗ್ಗೆ ಅಧಿಕ ಚಿಂತನೆ ನಡೆಸುವ ಅಗತ್ಯವಿಲ್ಲ.

ನಾವು ಹುಟ್ಟಿದ ತಾರೀಖು ಯಾವುದು? ಎನ್ನುವುದರ ಆಧಾರದಿಂದ ಅದೃಷ್ಟದ ವರ್ಷವನ್ನು ತಿಳಿಯಬಹುದು. ಅದು ಹೇಗೇ? ಎನ್ನುವುದರ ಬಗ್ಗೆ ನೀವು ತಿಳಿದುಕೊಳ್ಳಬೇಕು ಎನ್ನುವುದಾದರೆ ಈ ಈ ಸಂಖ್ಯೆಗೆ ವಾಟ್ಸ್ ಪ್ ಮಾಡಿ.
8197319164

ಸಂಖ್ಯೆ 1ರ ಅದೃಷ್ಟದ ವರ್ಷ

ಸಂಖ್ಯಾ ಶಾಸ್ತ್ರದ ಪ್ರಕಾರ, ದಿನಾಂಕ 1 10 19 28ರ ಅಡಿಯಲ್ಲಿ ಜನಿಸಿದವರ ಅದೃಷ್ಟದ ವರ್ಷ 21 ಎಂದು ಹೇಳಲಾಗುತ್ತದೆ. ಈ ವರ್ಷದಲ್ಲಿ ವ್ಯಕ್ತಿ ಎಲ್ಲಾ ವಿಚಾರದಲ್ಲೂ ಯಶಸ್ಸು ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಲಾಭವನ್ನು ಅನುಭವಿಸಲು ಆರಂಭವಾಗುವುದು. ಈ ವರ್ಷದಲ್ಲಿ ಬಹಳಷ್ಟು ಹಣದ ಹರಿವನ್ನು ಅನುಭವಿಸುತ್ತಾರೆ.

ಸಂಖ್ಯೆ 2ರ ಅದೃಷ್ಟದ ವರ್ಷ

ದಿನಾಂಕ 2, 11 ಮತ್ತು 20ರಲ್ಲಿ ಜನಿಸಿದವರ ಜನನದ ಸಂಖ್ಯೆ 2 ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳಿಗೆ ಅವರ ಅದೃಷ್ಟದ ವರ್ಷವು 22 ನೇ ವರ್ಷ. ಈ ವರ್ಷದಿಂದ ವ್ಯಕ್ತಿಯು ಕೆಲಸ ಮಾಡಲು ಆರಂಭಿಸುತ್ತಾನೆ. ಜೊತೆಗೆ ಉತ್ತಮ ಆದಾಯ ಹಾಗೂ ಹಣಕಾಸಿನ ಲಾಭವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ ಎಂದು ಹೇಳಲಾಗುತ್ತದೆ.


ಸಂಖ್ಯೆ 3ರ ಅದೃಷ್ಟ ವರ್ಷ

ದಿನಾಂಕ 3 12 21 30ರ ಅಡಿಯಲ್ಲಿ ಜನಿಸಿದವರ ಅದೃಷ್ಟದ ವರ್ಷ 21,23 ನೇ ವರ್ಷ ಎಂದು ಹೇಳಲಾಗುತ್ತದೆ. ಈ ವರ್ಷದಿಂದ ಅವರ ಕಷ್ಟಗಳು ಕರಗುತ್ತಾ ಬರುತ್ತವೆ. ಕಷ್ಟಪಟ್ಟು ಕೆಲಸ ಮಾಡುತ್ತಿರುವುದಕ್ಕೆ ಯಶಸ್ಸು ಸಾಧಿಸಲು ಸಹಾಯವಾಗುವುದು ಎಂದು ಹೇಳಲಾಗುವುದು.

ಸಂಖ್ಯೆ 4ರ ಅದೃಷ್ಟ ವರ್ಷ

ದಿನಾಂಕ 4 13 22 31ರಲ್ಲಿ ಜನಿಸಿದವರಿಗೆ ಅದೃಷ್ಟದ ವರ್ಷ 22,24 ಮತ್ತು 42 ಎಂದು ಹೇಳಲಾಗುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ ವ್ಯಕ್ತಿಗಳು ಹೆಚ್ಚು ಸಾಮಾಜಿಕ ಮನ್ನಣೆ, ಪ್ರಚಾರ, ವಿತ್ತೀಯ ಲಾಭ ಸೇರಿದಂತೆ ಇನ್ನಿತರ ಯಶಸ್ಸು ಸಾಧಿಸಲು ಆರಂಭವಾಗುವುದು ಎನ್ನಲಾಗುವುದು.

ಸಂಖ್ಯೆ 5ರ ಅದೃಷ್ಟದ ವರ್ಷ

ದಿನಾಂಕ 5 14 23ರಲ್ಲಿ ಜನಿಸಿದವರ ಅದೃಷ್ಟದ ವರ್ಷ 23 32 ನೇ ವರ್ಷ ಎಂದು ಹೇಳಲಾಗುತ್ತದೆ. ಇದು ಅವರ ಅದೃಷ್ಟದ ವರ್ಷವಷ್ಟೇ ಅಲ್ಲ, ಒಟ್ಟಾರೆ ಖ್ಯಾತಿಯನ್ನು ಪಡೆಯಲು ಸಹಾಯ ಮಾಡುವ ವರ್ಷ ಎಂದು ಹೇಳಲಾಗುವುದು.

ಸಂಖ್ಯೆ 6ರ ಅದೃಷ್ಟದ ವರ್ಷ

ದಿನಾಂಕ 6 15 24
ರಲ್ಲಿ ಜನಿಸಿದವರ ಅದೃಷ್ಟ ಅವರ 24 33 42 ನೇ ವರ್ಷದಿಂದಲೇ ಆರಂಭವಾಗುತ್ತದೆ ಎನ್ನಲಾಗುವುದು. ಇದು ಅವರ ಕನಸನ್ನು ನನಸಾಗಿಸಿಕೊಳ್ಳುವ ವರ್ಷವಾಗಿರುತ್ತದೆ. ಅಲ್ಲದೆ ಬಯಸಿದವರೊಂದಿಗೆ ಜೊತೆಗೂಡಿ ಕೆಲಸ ನಿರ್ವಹಿಸಲು ಹಾಗೂ ಯಶಸ್ಸನ್ನು ಸಾಧಿಸಲು ಅನುವುಮಾಡಿಕೊಡುವ ವರ್ಷ ಎಂದು ಹೇಳಲಾಗುವುದು.

ಸಂಖ್ಯೆ 7ರ ಅದೃಷ್ಟ ವರ್ಷ

ದಿನಾಂಕ 7 16 25ರಲ್ಲಿ ಜನಿಸಿದವರ ಅದೃಷ್ಟದ ವರ್ಷ 38 ಮತ್ತು 44 ಎಂದು ಹೇಳಲಾಗುವುದು. ಈ ವರ್ಷಗಳಿಂದ ವ್ಯಕ್ತಿ ಹಂತ ಹಂತವಾಗಿಯೇ ಅದೃಷ್ಟವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಅಲ್ಲದೆ ಕಷ್ಟ ಪಟ್ಟು ಕೆಲಸ ಮಾಡಿರುವುದಕ್ಕೆ ಉತ್ತಮ ಫಲಿತಾಂಶ ಪಡೆಯಲು ಪ್ರಾರಂಭಿಸುತ್ತಾರೆ.

ಸಂಖ್ಯೆ 8ರ ಅದೃಷ್ಟದ ವರ್ಷ

ದಿನಾಂಕ 8 17 26ರಲ್ಲಿ ಜನಿಸಿದವರಿಗೆ 21,23 ಮತ್ತು 42ನೇ ವರ್ಷ ಎಂದು ಹೇಳಲಾಗುವುದು. 8ನೇ ಸಂಖ್ಯೆಯು ಸಂಕೀರ್ಣವಾದ ಸಂಖ್ಯೆ ಎಂದು ಹೇಳಲಾಗುವುದು. ಇವರ ಭವಿಷ್ಯ ಗುಲಾಬಿ ಹಾಸಿಗೆಯಂತಿದ್ದರೂ ಮುಳ್ಳುಗಳು ಜೊತೆಯಲ್ಲಿಯೇ ಇರುತ್ತವೆ. ಇವರಿಗೆ 36 ಮತ್ತು 42ನೇ ವರ್ಷದ ನಂತರ ಒಳ್ಳೆಯ ದಿನ ಪ್ರಾರಂಭವಾಗುವುದು.

ಸಂಖ್ಯೆ 9ರ ಅದೃಷ್ಟದ ವರ್ಷ

ದಿನಾಂಕ 9 18 27ರಲ್ಲಿ ಜನಿಸಿದವರಿಗೆ 21,27ನೇ ವರ್ಷ ಅದೃಷ್ಟದ ವರ್ಷವಾಗಿರುತ್ತದೆ. ಈ ವರ್ಷದಲ್ಲಿ ವ್ಯಕ್ತಿ ಖ್ಯಾತಿ ಮತ್ತು ಬಹಳಷ್ಟು ಹಣವನ್ನು ಗಳಿಸುತ್ತಾನೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.


ಶ್ರೀದೀಪ ಆರಾಧ್ಯ ಸಂಖ್ಯಾಜ್ಯೋತಿಷಿ
8197319164

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: