12 ವರ್ಷಗಳ ವನವಾಸದ ನಂತರ ನನಸಾದ ಕನಸು

ಬಳ್ಳಾರಿ ನಗರದ ನಿವಾಸಿಗಳ ಕನಸು ಈಗ ನನಸಾಗಿದೆ.  24 ಗಂಟೆಯೂ ನೀರು ಪೂರೈಕೆ ಯೋಜನೆಯ ಅನುಷ್ಟಾನಕ್ಕೆ  ಚಾಲನೆ ನೀಡಲಾಗಿದೆ.  ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಭೈರತಿ ಬಸವರಾಜ 12 ವಲಯಗಳಿಗೆ ನೀರು ಪೂರೈಸುವ  ಯೋಜನೆಗೆ ಚಾಲನೆ ನೀಡಿದ್ದಾರೆ. 

ಬಳ್ಳಾರಿ ನಗರದಲ್ಲಿ  ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ಮೊಟ್ಟ ಮೊದಲ ಬಾರಿಗೆ 2008ರಲ್ಲಿ ಭಾರತೀಯ ಜನತಾ ಪಕ್ಷದ ಸರಕಾರ ಅಸ್ಥಿತ್ವದಲ್ಲಿದ್ದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿಯವರು ಅಂದು ಕಂಡ ಕನಸು ಹಲವು ಅಡೆತಡೆಗಳನ್ನು ಕಂಡು ಇಂದು ನನಸಾಗಿದೆ.
 
2008ರಲ್ಲಿ ಸಿಕ್ಕ 24*7 ನೀರು ಪೂರೈಕೆ ಕಾಮಗಾರಿಗೆ ಚಾಲನೆ ಸಿಕ್ಕ ನಂತರದ 5 ವರ್ಷಗಳಲ್ಲಿ ಕಾಮಗಾರಿ ಬಿರುಸಾಗಿ ನಡೆದಿರಲಿಲ್ಲ. ಶಾಸಕ ಸೋಮಶೇಖರ ರೆಡ್ಡಿ ಸತತವಾಗಿ ಕಾಮಗಾರಿ ಅನುಷ್ಠಾನದ ಬಗ್ಗೆ ಧ್ವನಿ ಏತ್ತುತ್ತಲೇ ಬಂದರು. ಸರಕಾರ ಅಸ್ಥಿತ್ವದಲ್ಲಿ ಇಲ್ಲದಿದ್ದರೂ ಹಾಲಿ ಶಾಸಕ ಸೋಮಶೇಖರ ರೆಡ್ಡಿ ಈ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದರು.
ಇಂದು ಅದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವ ಈ ಸಂದರ್ಭದಲ್ಲೇ ಗಾಲಿ ಜನಾರ್ಧನ ರೆಡ್ಡಿಯವರ ಕನಸನ್ನು ನನಸು ಮಾಡು ನಿಟ್ಟಿನಲ್ಲಿ ಅವರ ಸಹೋದರ,ನಗರದ ಹಾಲಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದೆ.

2008ರಲ್ಲಿ ಪ್ರಭಾವಿ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಮತ್ತು ಹಾಲಿ ಆರೋಗ್ಯ ಸಚಿವರಾದ ಬಿ ಶ್ರೀರಾಮುಲು ಅವರು ಬಳ್ಳಾರಿಗೆ ಅನೇಕ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ತದನಂತರದ ದಿನಗಳಲ್ಲಿ ಯೋಜನೆಗೆ ಹಲವು ಅಡೆತಡೆಗಳು ಉಂಟಾಗಿ ತಟಸ್ಥಗೊಂಡಿದ್ದ ಯೋಜನೆಗಳಿಗೆ ಇದೀಗ ಒಂದೊದೇ ಯೋಜನೆಗಳಿಗೆ ಚಾಲನೆ ಸಿಗುತ್ತಿವೆ.

ಹಾಲಿ ಸರ್ಕಾರದಲ್ಲಿ ಸಚಿವ ಬಿ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರದ್ದು, ಸೋಮಶೇಖರ ರೆಡ್ಡಿ ಶಾಸಕರಾಗಿದ್ದು ಅಂದು 2008ರಲ್ಲಿ ಜನಾರ್ಧರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿರಾಗಿದ್ದ ಸಂದರ್ಭದಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಮತ್ತೆ ಚಾಲನೆ ಸಿಕ್ಕಿರುವುದಕ್ಕೆ ಜಿಲ್ಲೆಯ ಜನತೆ ಮತ್ತು ರೆಡ್ಡಿಯವರ ಅಭಿಮಾನಿಗಳು ಹರ್ಷವ್ಯಕ್ತಪಡಿಸುತ್ತಿದ್ದಾರೆ.

ನೀರಿನ ಯೋಜನೆಯಂತೆ ಅನೇಕ ಇನ್ನೂ ಹಲವು ಯೋಜನೆಗಳು ರಿಂಗ್ ರಸ್ತೆ, ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಬಳ್ಳಾರಿ ವಿಮಾನ ನಿಲ್ದಾಣದಂತಹ ಅನೇಕ ಯೋಜನಗಳಿಗೆ ಆದಷ್ಟು ಬೇಗನೆ ಚಾಲನೆ ದೊರೆಯಲಿ, ಜನಾರ್ಧನ ರೆಡ್ಡಿ ಅಂದು ಹಾಕಿಕೊಟ್ಟ ಕನಸಿನ ಯೋಜನೆಗಳು ನನಸಾಗಲಿ ಎಂದು ಬಳ್ಳಾರಿ ಜನತೆ ಬಯಸುತ್ತಿದ್ದಾರೆ.

ರಾಜಕೀಯ ಇಚ್ಚಾಶಕ್ತಿ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಈ ಹಿಂದೆ ಬಳ್ಳಾರಿ 2008ರಲ್ಲಿ ಸ್ವಾತಂತ್ರ್ಯನಂತರ ಕಂಡಿರದ ರೀತಿಯಲ್ಲಿ ಅನೇಕ ಅಭಿವೃದ್ದಿಗಳನ್ನು ಕಂಡಿತು. ರಸ್ತೆಗಳ ನಿರ್ಮಾಣ, ರಿಂಗ್ ರಸ್ತೆಗಳು,ಹೈಮಾಸ್ಕ್ ಲೈಟ್ ಗಳು , ಪಾರ್ಕ್ ಗಳು ,ಹಲವು ನಾಡಿನ ದಿಗ್ಗಜರ ಪ್ರತಿಮೆಗಳು ಹೀಗೆ ಹತ್ತು ಹಲವು ಅಭಿವೃದ್ದಿಗಳಲ್ಲಿ 2008ರಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದ ಬಳ್ಳಾರಿ ಜಿಲ್ಲೆ, ತದನಂತರದ ದಿನಗಳಲ್ಲಿ ಕೊಂಚ ಮಟ್ಟಿಗೆ ಹಿನ್ನಡೆ ಸಾಧಿಸಿತ್ತು,

ಈಗ ಆ ಯೋಜನೆಗಳಿಗೆ ಚಾಲನೆ ಸಿಗುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಹರ್ಷ ತಂದಿದೆ. ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರಾದ ಜನಾರ್ಧನರೆಡ್ಡಿ ಅವರನ್ನು ಜಿಲ್ಲೆಯ ಜನತೆ ಅಭಿನಂದಿಸುತ್ತಿದ್ದಾರೆ. ಪಕ್ಷ ಯಾವುದೆ ಇರಲಿ ಶಾಸಕರು, ಸಚಿವರು ಯಾರೆ ಆಗಿರಲಿ ರಾಜಕೀಯ ಇಚ್ಚಾಶಕ್ತಿ ಇದ್ದರೆ ಯೋಜನೆ ಅನುಷ್ಟಾನಕ್ಕೆ ಬರುತ್ತಿರುವುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ.

ತಮ್ಮ ಅಧಿಕಾರದ ಅವಧಿಯಲ್ಲಿಯೇ ಈ ಯೋಜನೆಗೆ ಚಾಲನೆ ಕೊಡಿಸುತ್ತಿರುವ ಶಾಸಕ ಸೋಮಶೇಖರ ರೆಡ್ಡಿ ನಿಜಕ್ಕೂ ಇಂದು ಈ ಯೋಜನೆಯ ಅನುಷ್ಠಾನದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 90.55 ಕೋಟಿ ರೂಪಾಯಿ ವೆಚ್ಚದ 446 ಕಿಲೋ ಮೀಟರ ಪೂರ್ಣಗೊಂಡ ಪೈಪಲೈನ್ ವಿಸ್ತೀರ್ಣ, 28 ವಲಯಗಳಲ್ಲಿ ಅನುಷ್ಠಾನದ ಯೋಜನೆ, ಅದರಲ್ಲಿ 12 ವಲಯಗಳಲ್ಲಿ ಪೂರ್ಣಗೊಂಡ ಅನುಷ್ಠಾನ. ಒಟ್ಟು ಬಳ್ಳಾರಿ ನಗರದ ಜನತೆಗೆ ಕುಡಿಯುವ ನೀರಿನ ಬವಣೆ ಹಿಂಗಿಸುವ ನಿಟ್ಟಿನಲ್ಲಿ ಹಾಕಿಕೊಂಡಿದ್ದ, ಪ್ರಮುಖ ಯೋಜನೆಯೊಂದು ಜನರಿಗೆ ಸಮರ್ಪಿತವಾಗುತ್ತಿರುವುದು ಸಂತಸದ ಸಂಗತಿ.

ವರದಿ: ಪ್ರದೀಪ್ ಬೆಟಗೇರಿ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: