ಸಿದ್ದರಾಮಯ್ಯನವರಾದ್ರು ಬುದ್ದಿ ಹೇಳಬಾರದಿತ್ತೇ ಈ ನಟಿಗೆ – ಮಾಸ್ಕ್ ಹಾಕದೇ ಪೋಸ್ ಕೊಟ್ಟು ಟ್ರೋಲಾದ ಕಾರುಣ್ಯ

ಬೆಂಗಳೂರು :  ಕೊರೋನಾ ಸಂಕಷ್ಟ ಸಮಯದಲ್ಲಿ ಮಾಸ್ಕ್ ಧರಿಸುವುದು ಎಷ್ಟು ಅಗತ್ಯ ಅನ್ನುವುದು ಎಲ್ಲರಿಗೂ ಗೊತ್ತಿದೆ. ಗೊತ್ತಿಲ್ಲದವರಿಗೆ ತಿಳಿ ಹೇಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ಜೊತೆಗೆ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಪುಂಡರ ಬಾಲ ಕತ್ತರಿಸುವ ಸಲುವಾಗಿ ಮಾಸ್ಕ್ ಧರಿಸದಿರುವವರ ಮೇಲೆ ದಂಡ ಹಾಕುವ ಕಾನೂನು ಕೂಡಾ ಜಾರಿಯಾಗಿದೆ.

ಈ ನಡುವೆ ಮಾಸ್ಕ್ ಧರಿಸದೇ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ಫೋಸ್ ಕೊಟ್ಟು ನಟಿ ಕಾರಣ್ಯ ರಾಮ್ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ.

ಇತ್ತೀಚೆಗೆ ಕಾರುಣ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅದ್ಯಾವ ಕಾರ್ಯಕ್ರಮ ಅನ್ನುವುದನ್ನು ಅವರೇ ಹೇಳಿದ್ದಾರೆ.

View this post on Instagram

ಕಾಯಕವೇ ಕೈಲಾಸ ,ಜನರ ಸೇವೆಯೇ ಜನಾರ್ಧನ ಸೇವೆ ಎಂದು ಸುಮಾರು 35 ವರ್ಷಗಳಿಂದ ಜನರ ಹಾಗು ಸರ್ಕಾರದ ಸೇವೆಯನ್ನು ಮಾಡುತ್ತಾ ಬಂದಿರುವ ಸಹೃದಯವಂತರು,ಹೃದಯ ಶ್ರೀಮಂತರು ಆದ MLC Narayan Swamy @narayan459 ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ಮುಖ್ಯ ಸಚೇದಕರು ಸುಮಾರು ೧೦,000 ಕುಟುಂಬಗಳಿಗೆ ರೇಷನ್ ಹಾಗೂ ತರಕಾರಿಗಲ್ಲನ್ನ ನಮ್ಮ ಸ್ವಂತ ವೆಚ್ಚದಿಂದ ವಿತರಿಸಿದರು ,ಮತ್ತು ಲಾಕ್ ಡಾನ್ ಪ್ರಾರಂಭದಿಂದಲೂ ಪ್ರತಿ ದಿನಾ ಸುಮಾರು ೧೦೦೦ ದ ಊಟ ವ್ಯವಸ್ಥೆ ಮಾಡುತ್ತಲೇ ಬಂದಿದ್ಧಾರೆ ನಿಮಗೆ ಆ ತಾಯಿ ಚಾಮುಂಡೇಶ್ವರಿ ಮತ್ತಷ್ಟು ಆರೋಗ್ಯ,ಸಂಪತ್ತು ಹಾಗು ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಮಟ್ಟಕ್ಕೆ ಬೆಳೆಯಲು ಆಶೀರ್ವದಿಸಲಿ 🤗🎉💐👏🏼👍🏼 ಇವರ ಈ ಕೆಲಸವನ್ನು ಶ್ಲಾಘಿಸಲು ನಮ್ಮ X CM ಸಿದ್ಧರಾಮಯ್ಯನವರು ಭಾಗಿಯಾಗಿದ್ದರು 🙏🏻💐🎉👏🏼 : : #karunyaram #socialwork #mlcnarayanswamay #sidhramiah #helpinghands #fightagainstcorona #forneedy #work #dogood #bekind #begood

A post shared by Karunya (@ikarunya) on

ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಭಾಗಿಯಾಗಿದ್ದರು, ಕಾರ್ಯಕ್ರಮ ಮುಗಿದ ನಂತ್ರ ಕಾರುಣ್ಯ ಸಿದ್ದರಾಮಯ್ಯ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ತಪ್ಪೇನಿಲ್ಲ ಬಿಡಿ. ಆದರ ತಪ್ಪಾಗಿರುವುದು ಕಾರುಣ್ಯ ಕಡೆಯಿಂದ. ಕೊರೋನಾದಂತಹ ಮಹಾಮಾರಿ ಸಂದರ್ಭದಲ್ಲಿ ಮಾಸ್ಕ್ ಹಾಕದೇ ಫೋಟೋ ತೆಗೆಸಿಕೊಂಡಿರುವುದೇ ಎಡವಟ್ಟಾಗಿದೆ.

ಹೀಗಾಗಿ ಕಾರುಣ್ಯ ಅವರನ್ನು ಜನ ಟ್ರೋಲ್ ಮಾಡುತ್ತಿದ್ದಾರೆ. ಒಬ್ಬ ಸೆಲೆಬ್ರೆಟಿಯಾಗಿ ಹೀಗೆ ಮಾಡೋದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಹೋಗ್ಲಿ ಕಾರುಣ್ಯ ಅವರು ಇನ್ನು ಚಿಕ್ಕವರ ಗೊತ್ತಾಗಲಿಲ್ಲ. ಆದರೆ ನಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಅವರಾದ್ರು ಈ ಹುಡುಗಿಗೆ ಬುದ್ದಿ ಹೇಳಬೇಕು ತಾನೇ. ನೋಡಮ್ಮ ಮಾಸ್ಕ್ ಹಾಕದೇ ಹೀಗೆಲ್ಲಾ ಫೋಟೋ ತೆಗೆಯಬಾರದು. ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಹೇಳಬೇಕಿತ್ತು ತಾನೇ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: