ನಾಳೆಯಿಂದ ಮದ್ಯ ಸಿಗೋದಿಲ್ಲ.. ಎರಡನೇ ದಿನಕ್ಕೆ ಮದ್ಯದಂಗಡಿ ಬಂದ್…

ಬೆಂಗಳೂರು : ರಾಜ್ಯದ ಬೊಕ್ಕಸಕ ಖಾಲಿಯಾಗಿದೆ. ಹೇಗಾದರೂ ಸರಿ ದುಡ್ಡು ಹೊಂದಿಸಬೇಕು ಎಂದು ನಿರ್ಧರಿಸಿದ ರಾಜ್ಯ ಸರ್ಕಾರಗಳು ಮದ್ಯ ಮಾರಾಟ ಪ್ರಾರಂಭಿಸಿವೆ. ಎರಡು ದಿನಗಳ ಕಾಲ ಭರ್ಜರಿ ವ್ಯಾಪಾರವೂ ನಡೆದಿದೆ.

ಆದರೆ ಇದೀಗ ಎರಡನೇ ದಿನಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಮದ್ಯ ಮಾರಾಟ ಮಾಡಿ ಸುಸ್ತಾಗಿ ಹೋಗಿದೆ.  ಮುಂಬೈ ನಲ್ಲಿ ಕುಡುಕರನ್ನು ನಿಯಂತ್ರಿಸುವುದೇ ದೊಡ್ಡ ತಲೆ ನೋವಾಗಿರುವ ಹಿನ್ನಲೆಯಲ್ಲಿ Mumbai Municipal Corporation ಬುಧವಾರದಿಂದ ಮದ್ಯದಂಗಡಿಗಳಿಗೆ ಬಾಗಿಲು ಹಾಕಲು ನಿರ್ಧರಿಸಿದೆ.

ಮದ್ಯದಂಗಡಿಗಳಲ್ಲಿ ಸಿಕ್ಕಾಪಟ್ಟೆ ಜನ ಸೇರುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಕುಡುಕರಿಗೆ ಮಾಸ್ಕ್ ಹಾಕಿ ಅನ್ನುವುದೇ ದೊಡ್ಡ ತಲೆ ನೋವು. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಫೀಲ್ಡ್ ನಲ್ಲಿರುವ ಅಧಿಕಾರಿಗಳು ಅಳಲು ತೋಡಿಕೊಂಡಿರುವ ಈ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಹೀಗಾಗಿ ಎರಡು ದಿನಗಳ ಮುಂಬೈ ನಲ್ಲಿ ಕುಡಿದವನೇ ಹಿರೋ, ರಶ್ ಕಡಿಮೆಯಾಗ್ಲಿ ಆಮೇಲೆ ಹೋಗೋಣ ಅಂದುಕೊಂಡ ಮುಂಬೈ ವಾಲನ ಪಾಲಿಗೆ ಇದೀಗ ನಿರಾಶೆ ಸುದ್ದಿ.

ಆದರೆ ಕರ್ನಾಟಕದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ಯದಂಗಡಿಗಳ ಮುಂದೆ ಸಾಮಾಜಿಕ ಅಂತರವೇ ಇಲ್ಲದಂತಾಗಿದೆ. ಕುಡುಕರು ಎರಡನೇ ದಿನದಲ್ಲಿ ಮಾಡಿದ ಆವಾಂತರಗಳು ನ್ಯೂಸ್ ಚಾನೆಲ್ ಗಳಲ್ಲಿ ಬಹಿರಂಗವಾಗಿ. ಆದರೆ ಕರ್ನಾಟಕ ಸರ್ಕಾರ ಮದ್ಯದಂಗಡಿಗಳೇ ಬಾಗಿಲು ಹಾಕೋದು ಅನುಮಾನ. ಅದಕ್ಕೆ ಮದ್ಯದಿಂದ ಬರುವ ಆದಾಯ ಬಿಟ್ರೆ ಬೇರೆ ಆದಾಯವೇ ಇಲ್ವಂತೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: