ಆಪರೇಷನ್ ಕಮಲ ಬಗ್ಗೆ ಪುಸ್ತಕ ಬರೆಯುತ್ತಾರಂತೆ ಹಳ್ಳಿ ಹಕ್ಕಿ…

ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸರ್ಕಾರ ರಚಿಸಿದ್ದು ಇತಿಹಾಸ. ಆಪರೇಷನ್ ಕಮಲ ಅನ್ನುವ ದಾಳ ಉರುಳಿಸಿದ್ದ ಬಿಜೆಪಿ ಅಧಿಕಾರಕ್ಕಾಗಿ ಅಡ್ಡ ಹಿಡಿದು ಇದೀಗ ಪರಿತಪಿಸುತ್ತಿದೆ.

ಒಂದು ಕಡೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದ ಮಿತ್ರ ಮಂಡಳಿ ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದೆ. ಆದರೆ ಬಿಜೆಪಿ ಹೈಕಮಾಂಡ್ ನಿಧಾನವೇ ಪ್ರಧಾನ ಎಂದು ಕಾಲ ತಳ್ಳುತ್ತಿದೆ.

ಮತ್ತೊಂದು ಕಡೆ ಉಪ ಚುನಾವಣೆಯಲ್ಲಿ ಸೋತವರು ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದಿದ್ದಾರೆ. ಪ್ರತ್ಯಕ್ಷವಾಗಿ ಒತ್ತಡ ಹೇರಲು ಅಸಾಧ್ಯವಾಗಿರುವ ಹಿನ್ನಲೆಯಲ್ಲಿ ಪರೋಕ್ಷ ತಂತ್ರಗಳಿಗೆ ಮೊರೆ ಹೋಗಿದ್ದಾರೆ.

ಎಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ರಮೇಶ್ ಜಾರಕಿಹೊಳಿ ಮತ್ತು ನಾರಾಯಣಗೌಡ ಹೇಳುವ ಮೂಲಕ ಯಡಿಯೂರಪ್ಪ ಬುಡಕ್ಕೆ ಮತ್ತೊಂದು ಸಂಕಷ್ಟ ತಂದೊಡ್ಡಿದ್ದಾರೆ.

ಈ ನಡುವೆ ಹಳ್ಳಿ ಹಕ್ಕಿ ಖ್ಯಾತಿಯ ವಿಶ್ವನಾಥ್ ಪುಸ್ತಕದ ಮೂಲಕ ಸಚಿವ ಸ್ಥಾನಕ್ಕಾಗಿ ಬೆದರಿಕೆ ತಂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ತಾವೊಂದು ಪುಸ್ತಕ ಬರೆಯುತ್ತಿರುವ ಬಗ್ಗೆ ಆತ್ಮೀಯರಲ್ಲಿ ಹೇಳಿಕೊಂಡಿರುವ ವಿಶ್ವನಾಥ್, ಪುಸ್ತಕದ ಒಳಗೆ ಏನಿರಲಿದೆ ಅನ್ನುವುದನ್ನೂ ಹೇಳಿದ್ದಾರೆ. ಬಿಜೆಪಿ ಆಪರೇಷನ್ ಕಮಲದ ಸಹಾಯದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಹಿನ್ನೆಲೆಯನ್ನು ವಸ್ತುವನ್ನಾಗಿಸಿ, ಆಪರೇಷನ್ ಕಮಲ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಪುಸ್ತಕ ಬರೆಯುವುದಾಗಿ ಅವರು ಹೇಳಿಕೊಂಡಿದ್ದಾರೆ. ಪುಸ್ತಕದೊಳದಗೆ ಏನಿದೆ ಅನ್ನುವುದು ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಗೊತ್ತಾದ್ರೆ ಅವರು ಬೆವರುವುದು ಖಂಡಿತಾ.

ವಿಶ್ವನಾಥ್ ಅವರು ಹೇಳಿರುವ ಪ್ರಕಾರ ಈ ಪುಸ್ತಕದಲ್ಲಿ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ಹೇಗೆ? ಬಿಜೆಪಿ ಅಧಿಕಾರಕ್ಕೆ ಬರಲು ವೇದಿಕೆ ಕಲ್ಪಿಸಿದ್ದು ಹೇಗೆ? ಬಿಜೆಪಿಗೆ ಸಂಖ್ಯೆಯ ಅಗತ್ಯತೆಯಿದ್ದಾಗ ಅದನ್ನು ಒಗ್ಗೂಡಿಸಿದ್ದು ಹೇಗೆ?, ಆಪರೇಷನ್ ಕಮಲದಲ್ಲಿ ಹೆಚ್. ವಿಶ್ವನಾಥ್ ಹಾಗೂ ರಮೇಶ್ ಜಾರಕಿಹೊಳಿ ಪಾತ್ರವೇನು? ಆಪರೇಷನ್ ಕಮಲ ಮಾಡುವಾಗ ಬಿಜೆಪಿಯಿಂದ ಸಿಕ್ಕ ಭರವಸೆ, ಆಶ್ವಾಸನೆಗಳೇನು? ಉಪ-ಚುನಾವಣೆ ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದಿದ್ದು ಹೇಗೆ? ಹೀಗೆ ಎಲ್ಲಾ ವಿಚಾರವನ್ನು ಆ ಪುಸ್ತಕದಲ್ಲಿ ಬರೆಯುವುದಾಗಿ ಹೆಚ್. ವಿಶ್ವನಾಥ್ ಹೇಳಿಕೊಂಡಿದ್ದಾರೆ.

ಒಂದು ವೇಳೆ ಪುಸ್ತಕ ಪ್ರಕಟಗೊಂಡರೆ ಕಥೆ ಗೋವಿಂದ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: