ಕುಂಬಳಕಾಯಿ ಒಡೆದು ಅದೃಷ್ಟದ ಮನೆಗೆ ಕಾಲಿಟ್ಟ ಸಿದ್ದರಾಮಯ್ಯ…

ಕೊನೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಅದೃಷ್ಟಜ ಕಾವೇರಿ ನಿವಾಸವನ್ನು ತೆರವುಗೊಳಿಸಿ ಮತ್ತೊಂದು ಅದೃಷ್ಟದ ಮನೆಗೆ ಕಾಲಿಟ್ಟಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗುವುದಕ್ಕಿಂತ ಮುಂಚೆ ಗಾಂಧಿ ಭವನದ ಹಿಂಭಾಗದಲ್ಲಿರುವ ಸರ್ಕಾರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು.

2013ರ ಚುನಾವಣೆ ಎದುರಿಸಿ ಸಿಎಂ ಪಟ್ಟಕ್ಕೇರಿದ್ದ ಅವರು ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದರು. ಹೀಗಾಗಿ ಈ ಮನೆಯನ್ನು ಸಿದ್ದರಾಮಯ್ಯ ಅವರ ಅದೃಷ್ಟದ ಮನೆ ಎನ್ನಲಾಗುತ್ತದೆ.

ಆದರೆ ನಂತರದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತರು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ನಿಯಮಗಳ ಪ್ರಕಾರ ಸಿದ್ದರಾಮಯ್ಯ ಅವರಿಗೆ ಮನೆ ಪಡೆಯುಲು ಅವಕಾಶವಿರಲಿಲ್ಲ. ಹೀಗಾಗಿ ಜಾರ್ಜ್ ಹೆಸರಿನಲ್ಲಿ ಕಾವೇರಿ ಮನೆ ಮಂಜೂರು ಮಾಡಿಸಿಕೊಂಡು ಅಲ್ಲೇ ವಾಸ್ತವ್ಯ ಮುಂದುವರಿಸಿದರು.

ಯಾವಾಗ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತೋ, ಯಡಿಯೂರಪ್ಪ ಕಾವೇರಿ ನಿವಾಸಕ್ಕಾಗಿ ಪಟ್ಟು ಹಿಡಿದರು. ಆದರೆ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕನಾಗಿರುವ ತನಗೆ ಈ ಮನೆ ಮಂಜೂರು ಮಾಡಿ ಎಂದು ಮನವಿ ಮಾಡಿದರು.

ಆದರೆ ಸರ್ಕಾರಕ್ಕೆ ಇದಕ್ಕೆ ಒಪ್ಪಲಿಲ್ಲ. ನೀವು ಮನೆ ಖಾಲಿ ಮಾಡಲೇಬೇಕು. 2013ರಲ್ಲಿ ನೀವು ವಾಸ್ತವ್ಯ ಹೂಡಿದ್ದ ಮನೆಯನ್ನು ಮಂಜೂರು ಮಾಡುವುದಾಗಿ ಹೇಳಿತು.

ಹೀಗಾಗಿ ತಿಂಗಳ ಹಗ್ಗ ಜಗ್ಗಾಟದ ನಂತ್ರ ಸಿದ್ದರಾಮಯ್ಯ ತಮ್ಮ ಹಳೆಯ ಲಕ್ಕಿ ಮನೆಗೆ ಇಂದು ಶಿಫ್ಟ್ ಆಗಿದ್ದಾರೆ.

ಗಾಂಧಿ ಭವನದ ಹಿಂಭಾಗದಲ್ಲಿರುವ ಹೊಸ ಮನೆ ಪ್ರವೇಶಕ್ಕೂ ಮುನ್ನ ಕುಟುಂಬಸ್ಥರು ವಿಶೇಷ ಪೂಜೆ ನಡೆಸಿ ಮನೆಯ ದ್ವಾರದ ಎದುರು ಬೂದ ಕುಂಬಳ ಕಾಯಿಯನ್ನೂ ಒಡೆದಿದ್ದಾರೆ.

ಇನ್ನು ಇದನ್ನು ಚಿತ್ರೀಕರಿಸಲು ಹೋದ ಮಾಧ್ಯಮಗಳ ಮೇಲೆ ಎಗರಾಡಿದ ಸಿದ್ದರಾಮಯ್ಯ, ಅನುಮತಿ ಇಲ್ಲದೆ ಒಳಗೆ ಬಂದಿದ್ಯಾಕೆ, ನಡಿಯಿರಿ ಹೊರಕ್ಕೆ, ಹೊರಗಡೆ ಕಳುಹಿಸಿ ಅವರನ್ನು ಅಂದಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: