ಸಿಕೆಪಿಯಲ್ಲಿ ಅರ್ಬನ್ ಬಜಾರ್ 2020 – ಒಂದೇ ಸೂರಿನಡಿ ವಿನೂತನ ಶೈಲಿಯ ಕಲಾ ಉತ್ಪನ್ನ..

ನಿಮ್ಮಕನಸಿನ ಮನೆಯನ್ನು ಡೆಕೋರೇಟ್ ಮಾಡಬೇಕು ಅಂದುಕೊಂಡಿದ್ದೀರಾ… ಮನೆಯ ಅಲಂಕಾರದ ಬಗ್ಗೆ ಸಿಕ್ಕಾ ಪಟ್ಟೆ ಕ್ರೇಜ್ ಇದೆಯಾ ? ವಿಭಿನ್ನ ವಿನ್ಯಾಸಗಳ ಆಭರಣಗಳನ್ನು ನೀವು ತುಂಬಾನೇ ಇಷ್ಟಪಡುತ್ತಿದ್ದೀರಾ ? ಆತ್ಯಾಧುನಿಕ ಮಾದರಿಯ ಟ್ರೆಂಡಿ ಫ್ಯಾಷನ್ ಉಡುಪುಗಳನ್ನು ಕೊಂಡುಕೊಳ್ಳಬೇಕಾ… ಹಾಗಿದ್ರೆ ನೀವು ಒಂದು ಸಾರಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ಗೆ ಒಂದು ರೌಂಡ್ ಹೊಡೆದುಕೊಂಡು ಬನ್ನಿ… ಇಂದೇ ಸೂರಿನಲ್ಲಿ ನಿಮಗೆ ಇಷ್ಟವಾದ ವಸ್ತುಗಳು, ಉತ್ಪನ್ನಗಳು, ಕಲಾಕೃತಿಗಳು ಸಿಗುತ್ತವೆ.

ಹೌದು, ಒಂದೇ ಸೂರಿನಡಿಯಲ್ಲಿ ನೂರಕ್ಕೂ ಅಧಿಕ ಮಳಿಗೆಗಳು…ವಿನೂತನ ಶೈಲಿಯ ಕಲಾ ಉತ್ಪನ್ನಗಳು… ವಿವಿಧತೆಯಲ್ಲಿ ಏಕತೆಯನ್ನು ಸಾರುವಂತಹ ಕಲಾ ಪ್ರಪಂಚವೇ ಇಲ್ಲಿ ಅನಾವರಣಗೊಂಡಿದೆ. ಜೈಪುರ, ಗುಜರಾತು, ರಾಜಸ್ತಾನ ಸೇರಿದಂತೆ ದೇಶದ ವಿವಿಧ ಭಾಗಗಳ ಕಲಾವಿದರು ಈ ಮಾರಾಟ ಮೇಳ ಮತ್ತು ಕರಕುಶಲ ಪ್ರದರ್ಶನದಲ್ಲಿ ಭಾಗಿಯಾದ್ರು. ಮೇಳದಲ್ಲಿ ನಿಮ್ಮ ಕನಸಿನ ಮನೆಯನ್ನು ಅಲಂಕಾರ ಮಾಡುವಂತಹ ಉತ್ಪನ್ನಗಳು, ಹ್ಯಾಂಡ್ ಲೂಮ್ ಬಟ್ಟೆಗಳು, ಮಹಿಳೆಯರ, ಮಕ್ಕಳ ಮತ್ತು ಪುರುಷರ ಸಿದ್ಧ ಉಡುಪುಗಳು, ಮರದ ಆಟಿಕೆಗಳು, ಪೀಠೋಪಕರಣಗಳು, ಮಹಿಳೆಯರ ಅಚ್ಚುಮೆಚ್ಚಿನ ಅಭರಣಗಳು, ಬೆಡ್ ಲೈನೆನ್, ವಿವಿಧ ಸಂಸ್ಕೃತಿಯನ್ನು ಸಾರುವಂತಹ ಕಲಾಕೃತಿಗಳು, ಮ್ಯಾಟ್‌ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ಹಲವಾರು ವಿಭಿನ್ನ ಮಾದರಿಯ, ವಿನೂತನ ವಿನ್ಯಾಸಗಳ ವಸ್ತುಗಳು ಇಲ್ಲಿ ಲಭ್ಯ ಇವೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಒಂದೇ ಸೂರಿನಡಿಯಲ್ಲಿ ನೂರಕ್ಕೂ ಅಧಿಕ ಮಳಿಗೆಗಳ ಮೂಲಕ ಕಲಾಕಾರರ ಕಲಾಕೃತಿಗಳಿಗೆ ಪ್ರೋತ್ಸಾಹ ನೀಡುವಂತಹ ಉದ್ದೇಶದಿಂದ ಗುರುವಾರ ಅರ್ಬನ್ ಬಜಾರ್ ೨೦೨೦ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಖಾತ್ಯ ಗಾಯಕಿ ಅನುರಾಧ ಭಟ್ ಉದ್ಘಾಟನೆ ಮಾಡಿದರು. ಇನ್ನೂ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಮಮತ ದೇವರಾಜ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ರು.

ಜನವರಿ 24ರಿಂದ ಫೆಬ್ರವರಿ 2ರವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆಯಲಿರುವ ಅರ್ಬನ್ ಬಜಾರ್ ೨೦೨೦ಯಲ್ಲಿ ಸಕತ್ತಾಗಿಯೇ ಶಾಪಿಂಗ್ ಮಾಡಬಹುದು. ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಈ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಹಾಗೇ ಪರಿಣತ ಕರಕುಶಲಕರ್ಮಿಗಳಿಂದ ವಿಶೇಷ ಕಾರ್ಯಾಗಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾಧಿಸಿಕೊಂಡು ಸಕತ್ತಾಗಿಯೇ ಇಲ್ಲಿ ಶಾಪಿಂಗ್ ಮಾಡಬಹುದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: