Advertisements

ವಾಸುಕಿ ಜೊತೆ ಕೆಲಸ ಮಾಡಲು ಬಯಸಿದ ಸುದೀಪ್….!

ಕಿಚ್ಚ ಸುದೀಪ್ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದ್ದಾರೆ. ಬದಲಾಗಿದ್ದಾರೆ ಅನ್ನುವುದಕ್ಕಿಂತ ಮಾಗಿದ್ದಾರೆ ಅಂದ್ರೆ ತಪ್ಪಗಾದು. ಅನುಭವ ಅವರನ್ನು ಇನ್ನಷ್ಟು ಹಿರಿಯರನ್ನಾಗಿಸಿದೆ. ಅವರ ನಡೆ ನುಡಿಗಳೇ ಅದಕ್ಕೆ ಸಾಕ್ಷಿ.

ಇದು ಮತ್ತೊಮ್ಮೆ ಸಾಬೀತಾಗಿದ್ದು ಭಾನುವಾರ ಪ್ರಸಾರವಾದ ಸೂಪರ್ ಸಂಡೇ ವಿದ್ ಸುದೀಪ್ ಕಾರ್ಯಕ್ರಮದಲ್ಲಿ.

ಕೆಲ ವಾರಗಳ ಹಿಂದೆ ಜೈಲು ಸೇರಿದ್ದ ವಾಸುಕಿ ಮನಸ್ಸಿಂದ ಯಾರೂನು ಕೆಟ್ಟೋರಲ್ಲ ಎಂಬ ಹಾಡು ರಚಿಸಿ, ಹಾಡಿ ಕನ್ನಡಿಗರ ಮನ ರಂಜಿಸಿದ್ದರು. ಈ ಹಾಡಿಗೆ ಮನ ಸೋತಿದ್ದ ಸುದೀಪ್ ತಮ್ಮದೇ ದನಿಯಲ್ಲಿ ಹಾಡಿ ಸಂಭ್ರಮಿಸಿದ್ದರು.

ಇದೀಗ ವಾಸುಕಿ ವೈಭವ್ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾಂಟಿಕ್ ಗೀತೆಯೊಂದನ್ನು ರಚಿಸಿದ್ದಾರೆ. “ತಲೆ ಗಿರ ಗಿರ ಗಿರ” ಎಂಬ ಹಾಡನ್ನು ವಾಸುಕಿ ವೈಭವ್ ಬರೆಯುವುದರ ಜೊತೆಗೆ ರಾಗವನ್ನೂ ಸಂಯೋಜಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲೇ ಹೊಸೆದಿರುವ ಈ ಹಾಡು ಕೂಡಾ ಸುದೀಪ್‌ ಅವರ ಮನಸ್ಸಿದೆ ತಟ್ಟಿದ್ದು, ಸೂಪರ್ ಸಂಡೇ ವಿದ್ ಸುದೀಪ್ ಕಾರ್ಯಕ್ರಮದಲ್ಲಿ ತಮಗಾಗಿ ಹಾಡುವಂತೆ ಮನವಿ ಮಾಡಿದರು. ಅತ್ತ ವಾಸುಕಿ ವೈಭವ್ ಹಾಡು ಪ್ರಾರಂಭಿಸಿದರೆ ವೇದಿಕೆಯಲ್ಲಿದ್ದ ಸುದೀಪ್ ಹಾಡು ಕೇಳುತ್ತಾ ತನ್ಮಯರಾದರು, ತಮ್ಮದೇ ಲೋಕಕ್ಕೆ ಜಾರಿ ಹೋದರು. ಹಾಡು ಮುಗಿಯುತ್ತಿದ್ದಂತೆ ಅದ್ಭುತ ಅನ್ನುವ ಎಂದು ಬೆನ್ನು ತಟ್ಟಿದರು.

ಜೀವನದಲ್ಲಿ ಅವಕಾಶ ಸಿಕ್ಕಿದರೆ ನಿಮ್ಮ ಜೊತೆ ಕೆಲಸ ಮಾಡುತ್ತೇನೆ ಎಂದು ಸುದೀಪ್ ಹೇಳುತ್ತಿದ್ದಂತೆ, ಭಾವ ಪರವಶರಾದ ವಾಸುಕಿ ಎದ್ದು ನಿಂತು ಕೈ ಮುಗಿದು ಧನ್ಯವಾದ ಸಲ್ಲಿಸಿದರು. ನಿಮ್ಮಂತಹವರ ಜೊತೆ ಕೆಲಸ ಮಾಡುವುದು ನಮಗೆ ಗೌರವ ಎಂದು ಸುದೀಪ್ ಹೇಳುತ್ತಿದ್ದಂತೆ ಅದೊಂದು ನನ್ನ ಪುಣ್ಯ ಅಂದರು ವಾಸುಕಿ.

ಈ ವೇಳೆ ನಾವೆಲ್ಲ ಕಿರಿಯರು, ನಮ್ಮದು ಏನೂ ಇಲ್ಲ, ಆ ಭಗವಂತ ಮತ್ತು ಪ್ರೇಕ್ಷಕರು ಕೈ ಹಿಡಿದ್ರೆ ನಾವು. ಕ್ಯಾಮಾರಮೆನ್, ಡಿಸೈನರ್, ಮೇಕಪ್ ಕಲಾವಿದರು, ಡೈಲಾಗ್ ಬರೆಯುವವರು, ಸಂಗೀತ ನೀಡುವವರು ನಿಜಯವಾದ ಹಿರೋಗಳು ಅನ್ನುವ ಮೂಲಕ ತೆರೆಯ ಹಿಂದಿನ ಶ್ರಮ ಜೀವಿಗಳಿಗೆ ಗೌರವ ಸಲ್ಲಿಸಿದರು ಸುದೀಪ್.

ಒಟ್ಟಿನಲ್ಲಿ ಸುದೀಪ್ ಅವರ ಮಾತುಗಳನ್ನು ಕೇಳಿದರೆ ಮುಂದೊಂದು ದಿನ ಅಂದ್ರೆ ಮಹಾಮನೆಯಿಂದ ಹೊರ ಬಂದ ಮೇಲೆ ಸುದೀಪ್ ಪ್ರಾಜೆಕ್ಟ್ ನಲ್ಲಿ ವಾಸುಕಿ ವೈಭವ ಕೆಲಸ ಮಾಡುವುದಂತು ಪಕ್ಕಾ.

Advertisements

Leave a Reply

%d bloggers like this: