Advertisements

ಪಾಪ್​ಕಾರ್ನ್ ಮಂಕಿ ಟೈಗರ್​ ಯಾಕೆ ಹೊಸ ಅಲೆ ಸೃಷ್ಠಿಸಲಿದೆ ಅಂದ್ರಾ ..?

ಸೂರಿ ಯವರ ಭಾರಿ ನಿರೀಕ್ಷೆ ಹುಟ್ಟಿಸಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ. ಈ ಚಿತ್ರ ಹಲವಾರು ವಿಶೇಷತೆಗಳಿಂದ ಕೂಡಿದೆ.

ಟ್ರೈಲರ್ ಇತ್ರೀಚೆಗಷ್ಟೆ ಬಿಡುಗಡೆ ಹೊಂದಿದ್ದು ಪಿಎಮ್ ಟಿಯ ರಾ ಲುಕ್ ಗಾಂಧಿನಗರದಲ್ಲಿ ಗುಲ್ಲೆಬಿಸಿದೆ.

ವಿಲನ್ ಕ್ಯಾರೆಕ್ಟರ್ ನಿಂದಲೆ ದಿನೇ ದಿನೆ ಲೈಕ್ಸ್ ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ ಒಬ್ಬ ಕಮರ್ಷಿಯಲ್ ಹೀರೋ ಗೂ ಮೀರಿದ ಪಾಪ್ಯುಲಾರಿಟಿ ಪಡೆದುಕೊಂಡ ಡಾಲಿ ಧನಂಜಯ್ ಯೂ ಟ್ಯೂಬ್​ ನಲ್ಲಿ ಪ್ರಸಿದ್ದಿ ಪಡೆಯುತ್ತಾ ಇಡೀ ತಂಡವನ್ನು ಮುನ್ನೆಡೆಸುತ್ತಿದ್ದಾರೆ.

ಇದಕ್ಕೆ ಸೂರಿ ಕಾರಣಕರ್ತ ಎಂದು ಗಾಂಧಿನಗರದ ಮಂದಿ ಮಾತನಾಡಿಕೊಂಡರೂ ಅವರ ಲೆವಲ್ ಗೆ ಒಬ್ಬ ನಟ ಕೆಲಸ ಮಾಡಬೇಕಾದ್ರೆ ಅದಕ್ಕೆ ಟ್ಯಾಲೆಂಟ್ ಬೇಕು ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಚಿತ್ರ ಹೊಸ ಅಲೆ ಸೃಷ್ಠಿಸಲಿದೆ ಎಂದು ನಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹೇಳಿಕೊಂಡಿದ್ದಾರೆ. ತಮ್ಮ ಮಾತುಗಳಿಂದ ನೂರಾರು ಮಿಲಿಯನ್ ಲೈಕ್ಸ್ ಪಡೆದಷ್ಟು ಸಂತೋಷವನ್ನು ಸೂರಿಯ ಪಿಎಮ್​ಟಿ ತಂಡಕ್ಕೆ ನೀಡಿದ್ದಾರೆ.

ಈ ಹಿಂದೆ ಪುನೀತ್ ಜೊತೆ ಸೂರಿ ಸೇರಿ ಜಾಕಿ, ಅಣ್ಣಾ ಬಾಂಡ್ ಮತ್ತು ಡೊಡ್ಮನೆ ಹುಡಗ ದಂತಹ ಹಿಟ್ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ.

ಹಾಗಾಗಿಯೇ ಚಿತ್ರವೊಂದರ ಫಸ್ಟ್ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಡೆ ಪ್ರಶಂಸೆಗಳ ಸುರಿಮಳೆಯಾಗಿರುವುದರ ಬಗ್ಗೆ ಅಪ್ಪು ವಿಗೂ ಖುಷಿಯಿದೆ. ಈ ಚಿತ್ರದ ಆಡಿಯೋ ರೈಟ್ಸ್ ತಮ್ ಪಿಆರ್​ಕೆ ಸಂಸ್ಥೆಗೆ ನೀಡಿರುವ ವಿಚಾರವಾಗಿ ಮಾತನಾಡಿದ ಪವರ್ ಸ್ಟಾರ್ ಧನಂಜಯ್ ಲುಕ್ಸ್ ಜತಜತೆಗೆ ಚರಣ್ ರಾಜ್ ಸಂಗೀತ ನಿರ್ದೇಶನವನ್ನ ಹಾಡಿ ಹೊಗಳಿದ್ದಾರೆ.

“ಸೂರಿ ಸರ್ ಪಿಕ್ಚರ್ ಅಂದ್ರೆ ತುಂಬಾ ರಾ ಆಗಿರುತ್ತೆ, ಟೀಸರ್ ಅಮೋಘವಾಗಿದೆ. ಬಹಳಷ್ಟು ಎಕ್ಸೈಟ್​ಮೆಂಟ್ ಇದೆ. ತಂಡಕ್ಕೆ ಆಲ್ ದಿ ಬೆಸ್ಟ್ ಹಾಗು ಈ ಚಿತ್ರದ ಬಗ್ಗೆ ನನಗೆ ಹೆಮ್ಮೆ ಇದೆ. ಟಗರು ನಂತರ ಇದು ಡಾಲಿ ಮತ್ತು ಸೂರಿ ಕಾಂಬಿನೇಷನ್ ನ ಎರಡನೇ ಚಿತ್ರ ಹಾಗಾಗಿ ಆಲ್ ದ ದಿ ಬೆಸ್ಟ್,” ಎಂದು ಅಪ್ಪು ವಿಷ್ ಮಾಡಿದ್ದಾರೆ.

ಪಿಎಮ್​ಟಿ ಗೆ ಸುರೇಂದ್ರ ನಾಥ್ (ಸೂರಿ) ಕಥೆ, ಸೂರಿ ಮತ್ತು ಅಮೃತ ಭಾರ್ಗವ್ ಸಂಭಾಷಣೆ ಇದೆ.
ಶೇಕರ್ ಅವರ ಛಾಯಾಗ್ರಹಣಕ್ಕೂ ಅಪ್ಪು ಫುಲ್ ಮಾರ್ಕ್ಸ್ ನೀಡಿರೋದು ಮತ್ತೊಂದು ವಿಶೇಷ.
ಸುಧೀರ್ ಕೆ.ಎಂ.ಅವರ ನಿರ್ಮಾಣದಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಹೊಸ ಅಲೆಯನ್ನೇಬಿಸೋ ಸೂಚನೆ ನೀಡಿದೆ.

Advertisements

Leave a Reply

%d bloggers like this: