ದಾಖಲೆ ಬರೆಯುವತ್ತ ಸಲಗ ಸೂರಿಯಣ್ಣ ಲಿರಿಕಲ್ ವಿಡಿಯೋ ಸಾಂಗ್..

ನಿರೀಕ್ಷೆಯಂತೆ ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸೂರಿಯಣ್ಣ ಸಾಂಗ್ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನ ಗ್ರ್ಯಾಂಡ್ ಆಗಿ ರಿಲೀಸ್ ಮಾಡಿದ್ದಾರೆ.

ಎ2 ಆಡಿಯೋ ಮೂಲಕ ಲೋಕಾರ್ಪಣೆಗೊಂಡಿರೋ ಸಲಗ ಚಿತ್ರದ ಸೂರಿಯಣ್ಣ ಸಾಂಗ್ ರಿಲೀಸ್ ಆಗ್ತಿದ್ದಂತೆ. ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಟಗರು ಚರಣ್ ರಾಜ್ ಸಂಗೀತ ಸಂಯೋಜನೆ ದುನಿಯಾ ವಿಜಯ್ ಕರಣ್ ಸಾಹಿತ್ಯ, ಆಂಟೋನಿ ದಾಸ್ ವಾಯ್ಸ್ ಎಲ್ಲವೂ ಮಿಕ್ಸ್ ಆಗಿ ಸಕ್ಸಸ್ ಸಾಂಗ್ ಆಗಿ ರಿಲೀಸ್ ಆಗಿರೋ ಸೂರಿಯಣ್ಣ ಸಾಂಗ್ ಕನ್ನಡ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಎಲ್ಲಾ ವರ್ಗದವರನ್ನೂ ಆಟ್ರ್ಯಾಕ್ಟ್ ಮಾಡ್ತಿದೆ. ಟಿಕ್ ಟಾಕುಲ್ಲಿ ಬೇಜಾನ್ ಟಾಕ್ ಕ್ರಿಯೇಟ್ ಮಾಡ್ತಿದೆ. 2020ಯ ಎಲ್ಲಾ ಫಂಕ್ಷನ್ ಗಳಲ್ಲೂ ಸಲಗ ಸಾಂಗ್ ಸೌಂಡ್ ಮಾಡೋದು ಗ್ಯಾರೆಂಟಿ. ಅಷ್ಟು ಸೌಂಡು ಈಗಾಗ್ಲೇ ಶುರುವಾಗಿದೆ.

ಸಲಗ ಚಿತ್ರದ ಮತ್ತೊಂದು ಟ್ರಂಪ್ ಕಾರ್ಡ್ ನಂತೆ ಕಾಣ್ತಿರೋ ಸೂರಿಯಣ್ಣ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಗೆ ಸಲಗ ಚಿತ್ರತಂಡಕ್ಕೆ ಇಡೀ ಚಿತ್ರೋದ್ಯಮದ ಸಾಥ್ ಕೊಟ್ಟಿದ್ದು ಅದ್ಭುತ ವಿಷ್ಯ. ಕನ್ನಡ ಚಿತ್ರರಂಗದ ನಾಯಕ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಸಾರಥ್ಯದಲ್ಲಿ ಶಿವಣ್ಣ ಸೂರಿಯಣ್ಣಹಾಡಿನ ವಿಡಿಯೋವನ್ನ ಅಧಿಕೃತವಾಗಿ ರಿಲೀಸ್ ಮಾಡಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

ಇದೇ ಕೆ,ಪಿ,ಶ್ರೀಕಾಂತ್ ಅವ್ರ ನಿರ್ಮಾಣದಲ್ಲಿ, ಟಗರು ಚಿತ್ರದಲ್ಲಿ ನಾಯಕನಾಗಿ ಟ್ರೆಂಡ್ ಸೆಟ್ ಮಾಡಿದ ಶಿವಣ್ಣ, ಆಲ್ಮೋಸ್ಟ್ ಅದೇ ಟಗರು ಟೀಮ್ ಮಾಡಿರೋ ಸಲಗಕ್ಕೆ ತಮ್ಮ ಸಂಪೂರ್ಣ ಸಾಥ್ ಕೊಟ್ಟು, ಈ ಸಿನಿಮಾ ಕೂಡ ಟಗರಿನಂತೆ ದೊಡ್ಡ ಯಶಸ್ಸು ಕಾಣಲಿದೆ ಅಷ್ಟು ಸ್ಟಫ್ ಈ ಚಿತ್ರದಲ್ಲಿದೆ ಅನ್ನೋ ಭರವಸೆಯ ಮಾತುಗಳನ್ನಾಡಿದ್ದಾರೆ.

ವಿಶೇಷ ಅಂದ್ರೆ, ಇಲ್ಲಿ ಸಲಗ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರೋ ದುನಿಯಾ ವಿಜಯ್ ಅವ್ರನ್ನ ಕನ್ನಡಚಿತ್ರರಂಗದ ಟ್ರೆಂಡಿ ನಿರ್ದೇಶಕರುಗಳಾದ, ತರುಣ್ ಸುಧೀರ್, ಎಪಿ ಅರ್ಜುನ್, ಬಹದ್ದೂರ್ ಚೇತನ್, ಪವನ್ ಒಡೆಯರ್, ಲಕ್ಕಿ ಸೂರಿ, ಮಹೇಶ್ ಕುಮಾರ್ ದುನಿಯಾ ವಿಜಯ್ ಅವ್ರನ್ನ ನಿರ್ದೇಶಕರ ಬಳಗಕ್ಕೆ ಸ್ವಾಗತಿಸಿದ್ರು.

ಅದೇ ರೀತಿ, ನಿರ್ಮಾಪಕರ ಸಂಘದ ವತಿಯಿಂದ ಸಾರಾ ಗೋವಿಂದು, ರಾಮೂರ್ತಿ, ಕೆ. ಮಂಜು, ಎನ್.ಎಸ್ ರಾಜ್ ಕುಮಾರ್ ಸೇರಿ ಸಲಗ ನಿರ್ಮಾಪಕ ಕೆ.ಪಿಶ್ರೀಕಾಂತ್, ಕಾರ್ಯಕಾರಿ ನಿರ್ಮಾಪಕ ನಾಗಿ ಹಾಗೂ ಬಡವ ರಾಸ್ಕೆಲ್ ಮೂಲಕ ನಿರ್ಮಾಪಕರಾಗಿರೋ ಡಾಲಿ ಧನಂಜಯ ಅವ್ರನ್ನ ಗೌರವಿಸಿದ್ರು. ಜೊತೆಗೆ ನಿರ್ಮಾಪಕರೆಲ್ಲಾ ಸೇರಿ ಸಲಗ ಚಿತ್ರಕ್ಕೆ ಶುಭ ಹಾರೈಸಿದ್ರು.

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ, ನಾಯಕ ದುನಿಯಾ ವಿಜಯ್ , ಡಾಲಿ ಧನಂಜಯ, ಸಂಜನಾ ಆನಂದ್, ಕಾಕ್ರೋಚ್ ಖ್ಯಾತಿಯ ಸುಧೀ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: